ಬೆಂಗಳೂರು : ನಶೆ ನಂಟು ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಸ್ಯಾಂಡಲ್‍ವುಡ್ ನಟಿಯರಾದ ರಾಗಿಣಿ, ಸಂಜನಾಗೆ ಮತ್ತೆ ಸಂಕಷ್ಟ ಶುರುವಾಗಿದೆ.
ಇವರಿಬ್ವರು ಆರೋಪಿಗಳು ಡ್ರಗ್ಸ್ ಸೇವಿಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿಯಲ್ಲಿ ಸಾಬೀತಾಗಿದೆ.
ಎಫ್‌ಎಸ್‌ಎಲ್ ವರದಿ ಆಧರಿಸಿ ಆರೋಪಿಗಳ ವಿರುದ್ಧ ಸಿಸಿಬಿ ಅಧಿಕಾರಿಗಳು 2,500 ಪುಟಗಳ ಹೆಚ್ಚುವರಿ ಆರೋಪಪಟ್ಟಿ(ಚಾರ್ಜ್‍ಶೀಟ್ )ಸಲ್ಲಿಸಿದ್ದಾರೆ.ಹೈಕೋರ್ಟ್ ಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‍ಶೀಟ್‍ನಲ್ಲಿ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಜೊತೆ ನಟಿಯರು ನೇರ ಸಂಪರ್ಕ ಹೊಂದಿರುವುದು ಉಲ್ಲೇಖವಾಗಿದೆ.
ಮನೆಯಲ್ಲಿ ಸಿಕ್ಕ ವಸ್ತುಗಳಲ್ಲಿ,ಕೂದಲಿನ ಫೋಲಿಕಲ್ ಟೆಸ್ಟ್‌ನಲ್ಲಿ ಡ್ರಗ್ಸ್ ಅಂಶ ಸಾಬೀತಾಗಿದೆ. ಇದರ ಆರೋಪಿಗಳ ಮಧ್ಯೆ ಹಣ ವರ್ಗಾವಣೆಯಾಗಿದ್ದಕ್ಕೆ ಬ್ಯಾಂಕ್ ಸ್ಟೇಟ್‌ಮೆಂಟ್ ದಾಖಲೆಗಳನ್ನು ಸಲ್ಲಿಸಲಾಗಿದೆ.
ಇದುವರೆಗೂ 4,000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಇನ್ನೂ 1,500 ಪುಟಗಳ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಲು ಸಿಸಿಬಿ ತಯಾರಿ ನಡೆಸಿದೆ.