ಆಸ್ಟ್ರೇಲಿಯನ್ ಓಪನ್; ವಿಶ್ವದಾಖಲೆಯ 21ನೇ ಗ್ರ್ಯಾನ್ ಸ್ಲ್ಯಾಮ್‌ ಪ್ರಶಸ್ತಿ ಗೆದ್ದ ರಫೆಲ್ ನಡಾಲ್ !

Prasthutha|

ಮೆಲ್ಬೋರ್ನ್; ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಚಿಯಾದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪೇನ್’ನ‌ ರಫೆಲ್ ನಡಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಟೆನಿಸ್ ಇತಿಹಾಸದಲ್ಲಿಯೇ 21 ಗ್ರ್ಯಾನ್ ಸ್ಲ್ಯಾಮ್‌ ಪ್ರಶಸ್ತಿ ಗೆದ್ದ ಮೊಟ್ಟ ಮೊದಲ ಆಟಗಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

- Advertisement -

ರೊಡ್ ಲಾವೆರ್ ಅರೆನಾದಲ್ಲಿ ಐದು ಗಂಟೆ 24 ನಿಮಿಷಗಳ ಕಾಲ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ನಡಾಲ್, ವಿಶ್ವ ನಂ.2 ಶ್ರೇಯಾಂಕಿತ ಆಟಗಾರ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 2-6 6-7 6-4 6-4 7-5 ಅಂತರದಲ್ಲಿ ಗೆದ್ದು ಸಂಭ್ರಮಿಸಿದ್ದಾರೆ.

28ನೇ ಗ್ರ್ಯಾನ್‌ ಸ್ಲಾಂ ಫೈನಲ್‌ ಆಡಲು ಇಳಿದಿದ್ದ ನಡಾಲ್, 2-6 6-7 ಅಂತರದಲ್ಲಿ ಮೊದಲ ಎರಡು ಸೆಟ್ ಸೋತು ಹಿನ್ನಡೆ ಅನುಭವಿಸಿದರೂ ಧೃತಿಗೆಡದೆ ತನ್ನ ಅನುಭವದ ಬತ್ತಳಿಕೆಯ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿ ನಂತರದ ಮೂರು ಸೆಟ್’ ಗೆಲ್ಲುವ ಮೂಲಕ ವಿಶ್ವ ದಾಖಲೆ ವೀರ ಎನಿಸಿದರು.

- Advertisement -

ಆ ಮೂಲಕ ತಲಾ 20 ಗ್ರ್ಯಾನ್ ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ದಿಗ್ಗಜರಾದ ಫೆಡರರ್ ಹಾಗೂ ಜೋಕೋವಿಚ್’ರನ್ನು ಹಿಂದಿಕ್ಕಿದರು.

ಕಳೆದ ಯುಎಸ್‌ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಜೋಕೋವಿಚ್‌ರನ್ನು ಸೋಲಿಸಿ 21ನೇ ಗ್ರ್ಯಾನ್‌ ಸ್ಲಾಂ ಗೆಲುವಿಗೆ ಅಡ್ಡಿಯಾಗಿದ್ದ ಮೆಡ್ವೆಡೆವ್‌, ನಡಾಲ್‌ರ ದಾಖಲೆಯ ಹಾದಿಯಲ್ಲೂ ಅಡ್ಡಿಯಾಗುವ ಲಕ್ಷಣಗಳನ್ನು ತೋರಿದರೂ ಸಹ ಅಂತಿಮವಾಗಿ ಗೆಲುವಿನ ನಗೆ ನಡಾಲ್ ಮುಖದಲ್ಲಿ ಮೂಡಿತು.
2019ರ ಯುಎಸ್‌ ಓಪನ್‌ ಫೈನಲ್‌ನಲ್ಲಿ ನಡಾಲ್‌ ವಿರುದ್ಧ ಡ್ಯಾನಿಲ್‌ ಸೋತಿದ್ದರು.



Join Whatsapp