ದುರಹಂಕಾರಿ ಸಚಿವರ ವಜಾಕ್ಕೆ ಶಾಸಕ ರೇಣುಕಾಚಾರ್ಯ ಆಗ್ರಹ

Prasthutha|

ಸ್ವ- ಪಕ್ಷದವರ ವಿರುದ್ಧವೇ ಹರಿಹಾಯ್ದ ಶಾಸಕ ರೇಣುಕಾಚಾರ್ಯ

- Advertisement -

ದಾವಣಗೆರೆ: ರಾಜ್ಯ ಸಚಿವ ಸಂಪುಟದಲ್ಲಿರುವ ದುರಹಂಕಾರಿ ಸಚಿವರ ಹೆಸರುಗಳನ್ನು ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ಇಂತಹವರಿಂದ ಪಕ್ಷಕ್ಕೆ-ಸಂಘಟನೆಗೆ ಮುಜುಗರವಾಗುತ್ತದೆ. ಇನ್ನು ನಾಲ್ಕು ದಿನಗಳಲ್ಲಿ ರಾಜ್ಯಾಧ್ಯಕ್ಷರು ಅವರನ್ನು ಕರೆಸಿ ಮಾತನಾಡುವ ಸಾಧ್ಯತೆಯಿದೆ. ಇಂತಹ ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

ಸಚಿವರನ್ನ ಕ್ಯಾಬಿನೆಟ್ ನಿಂದ ಕೈಬಿಡಬೇಕು, ದುರಹಂಕಾರಿ ಸಚಿವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ವಪಕ್ಷೀಯ ಸಚಿವರ ವಿರುದ್ಧವೇ ಗುಡುಗಿದ್ದಾರೆ.

- Advertisement -

ದಾವಣಗೆರೆಯ ಹೊನ್ನಾಳಿಯಲ್ಲಿ ಇಂದು ಕೆಲವು ಬಿಜೆಪಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 15 ದುರಹಂಕಾರಿ ಸಚಿವರ ವಿರುದ್ಧ ನಾನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ. ನಾವು ಕರೆ ಮಾಡಿದರೆ ಸಚಿವರು ನಮ್ಮ ಕರೆ ಸ್ವೀಕರಿಸುತ್ತಿಲ್ಲ. ಅವರಿಗೆ ಅಭಿವೃದ್ದಿ ಕೆಲಸಕ್ಕೆ ಪತ್ರ ಕೊಟ್ಟರೆ ಅವರ ಆಪ್ತ ಕಾರ್ಯದರ್ಶಿ ಪರಿಶೀಲಿಸಿ ಅಂತಾ ಅಧಿಕಾರಿಗಳಿಗೆ ಹೇಳುತ್ತಾರೆ ಎಂದು ಆರೋಪಿಸಿದರು.

ಇದು ಶಾಸಕರಿಗೆ ಮಾಡುತ್ತಿರುವ ಅವಮಾನವಾಗಿದ್ದು, 15 ಸಚಿವರನ್ನು ಸಂಪುಟದಿಂದ ವಜಾ ಮಾಡಿ ಸಿಎಂಗೆ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಒತ್ತಾಯಿಸಿದ್ದೇನೆ. ನಾನು 15 ಸಚಿವರ ವಿರುದ್ಧ ಲಿಖಿತ ದೂರು ನೀಡಿಲ್ಲ. ಕರೆ ಮಾಡಿ ಸಚಿವರ ವರ್ತನೆ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ನಾಲ್ಕು ದಿನದಲ್ಲಿ ಸಚಿವರ ಸಭೆ ಕರೆಯುವುದಾಗಿ ನಲೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ದುರಂಹಕಾರಿ ಸಚಿವರು ಸಂಪುಟದಲ್ಲಿರುವುದು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.

ನಾನು ಸಚಿವರೊಬ್ಬರಿಗೆ ಕರೆ ಮಾಡಿದೆ. ಅವರು ಕರೆ ರಿಸೀವ್ ಮಾಡಿಲ್ಲ. ಅವರ ಆಪ್ತ ಕಾರ್ಯದರ್ಶಿಗೆ ಮಾಡಿದರೆ ಕೋವಿಡ್ ಬಂದಿದೆ ಎಂದು ಹೇಳಿದ್ದಾರೆ. ಆದರೆ, ಅದೇ ಸಚಿವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದಾರೆ. ಇದು ನನಗೆ ಸಾಕಷ್ಟು ಬೇಸರ ತಂದಿರುವ ವಿಚಾರ. ಆದ್ದರಿಂದ ನಾನು ರಾಜ್ಯಾಧ್ಯಕ್ಷರ ಬಳಿ ಈ ಕುರಿತು ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

Join Whatsapp