ರೇಡಿಯೋ HRDF: ಮಿಥ್ಯ ಅಳಿಸಿದ ಸತ್ಯ ಪ್ರವಾದಿ; ಪ್ರಬಂಧ ಸ್ಪರ್ಧೆಯ ಬಹುಮಾನ ಪ್ರಕಟ

Prasthutha: December 1, 2021

►ನವೀನ್ ಆರ್ ಭಟ್ ಕಾರ್ಕಳ ಪ್ರಥಮ, ಮುತ್ತುರಾಜ್ ಎ. ಆರ್ ದ್ವಿತೀಯ ಸ್ಥಾನ

ಬೆಂಗಳೂರು: ರೇಡಿಯೋ HRDF ವತಿಯಿಂದ ಮಿಥ್ಯ ಅಳಿಸಿದ ಸತ್ಯ ಪ್ರವಾದಿ (ಸ ) ಅಭಿಯಾನದ ಪ್ರಯುಕ್ತ ಮಾನವ ಹಕ್ಕುಗಳ ಪ್ರತಿಪಾದಕ ಪ್ರವಾದಿ (ಸ ) ಎಂಬ ವಿಷಯದ ಕುರಿತು
ಮುಸ್ಲಿಮೇತರ ಬಂಧುಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.


ನವೀನ್ ಆರ್ ಭಟ್ ಕುಕ್ಕುಜೆ ಕಾರ್ಕಳ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನ ವನ್ನು ಮುತ್ತುರಾಜ್ ಎ. ಆರ್ ತುಮಕೂರು ಮತ್ತು ತೃತೀಯ ಸ್ಥಾನವನ್ನು ಎಸ್.ಎಲ್ ವರಲಕ್ಷ್ಮಿ ಮಂಜುನಾಥ್ ಪಡೆದಿದ್ದಾರೆ.

ಗುಣವತಿ ಧರ್ಮಸ್ಥಳ, ಡಾ.ಕೆ ಗೋವಿಂದ ಭಟ್ ಮತ್ತು ಶಾರದಾ ನಾಯ್ಕ್ ಶಾರದಾ ನಾಯ್ಕ್ ಭಟ್ಕಳ ಈ ಮೂವರು ತೀರ್ಪುಗಾರರ ಮೆಚ್ಚುಗೆ ಪಡೆದ ಬರಹ ಎಂಬ ಕಾರಣದಿಂದ ಪ್ರೋತ್ಸಾಹ ಬಹುಮಾನವನ್ನು ಘೋಷಿಸಲಾಗಿದೆ ಎಂದು ಸ್ಪರ್ಧೆಯ ನಿರ್ವಾಹಕ ಮುಹಮ್ಮದ್ ರಿಯಾಝ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!