16 ವರ್ಷಗಳ ಜೈಲು ವಾಸದ ಬಳಿಕ ಆತನನ್ನು ‘ತಪ್ಪಾಗಿ ಗುರುತಿಸಿದ್ದೆ’ ಎಂದ ಲೇಖಕಿ !

Prasthutha|

ಅಮೆರಿಕ: ಅತ್ಯಾಚಾರ ಪ್ರಕರಣದಲ್ಲಿ 16 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆಯಾಗಿದ್ದ ಆಫ್ರಿಕಾ ಮೂಲದ ಆಂಟನಿ ಬ್ರಾಡ್’ವಾಟರ್’ನನ್ನು, ನನ್ನ ಮೇಲೆ ಅತ್ಯಾಚಾರ ನಡೆಸಿದ್ದ ವ್ಯಕ್ತಿಯಾಗಿ ತಪ್ಪಾಗಿ ಗುರುತಿಸಿದ್ದೆ ಎಂದು ಅಮೆರಿಕದ ಬರಹಗಾರ್ತಿ ಆಲಿಸ್ ಸೆಬೋಲ್ಡ್ ಹೇಳಿದ್ದು, ‘ಮಹಾ ಪ್ರಮಾದ’ಕ್ಕಾಗಿ ಕ್ಷಮೆಯಾಚಿಸಿದ್ದಾರೆ.

- Advertisement -

ಜನಪ್ರಿಯ ಪುಸ್ತಕ ‘ದಿ ಲೈವ್ಲಿ ಬೋನ್ಸ್’ ಲೇಖಕಿ ಆಲಿಸ್ ಸೆಬೋಲ್ಡ್, ನ್ಯಾಯಾಲಯದಲ್ಲಿ ಬ್ರಾಡ್’ವಾಟರ್ ವಿರುದ್ಧ ಹೇಳಿಕೆ ನೀಡಿದ್ದ ಪರಿಣಾಮ ಅಮೂಲ್ಯ 16 ವರ್ಷ ಜೈಲಲ್ಲಿ ಕಳೆದುಹೋಗಿದೆ. 1981ರಲ್ಲಿ ಸಿರಾಕಸ್ ವಿಶ್ವವಿದ್ಯಾಲಯದಲ್ಲಿ  ಮೊದಲ ವರ್ಷ ವಿದ್ಯಾರ್ಥಿನಿಯಾಗಿದ್ದ ಆಲಿಸ್ ಸೆಬೋಲ್ಡ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಬ್ರಾಡ್’ವಾಟರ್ ಕಳೆದ ವಾರವಷ್ಟೇ ದೋಷಮುಕ್ತನಾಗಿದ್ದ.

ನ್ಯಾಯಾಲಯದಲ್ಲಿ ತನ್ನ ನಿರಪರಾಧಿತ್ವವನ್ನು ನಿರೂಪಿಸಲು ನಿರಂತರ ಪ್ರಯತ್ನ ನಡೆಸಿದ್ದರು ಪ್ರಯೋಜನವಾಗಿರಲಿಲ್ಲ. ಬಳಿಕ ಸ್ವತಃ ಆಲಿಸ್ ಸೆಬೋಲ್ಡ್ ತಪ್ಪೊಪ್ಪಿಗೆಯ ಪತ್ರವನ್ನು ನ್ಯಾಯಾಲಯಕ್ಕೆ ನೀಡಿದ ಹಿನ್ನೆಲೆಯಲ್ಲಿ ಬ್ರಾಡ್’ವಾಟರ್ ದೋಷಮುಕ್ತನಾಗಿ ಬಿಡುಗಡೆಯಾಗಿದ್ದ. ಆಲಿಸ್ ಸೆಬೋಲ್ಡ್ ತಪ್ಪೊಪ್ಪಿಗೆಯ ಪತ್ರವನ್ನು ನ್ಯಾಯಾಲಯದಲ್ಲಿ ಓದಿದಾಗ ಬ್ರಾಡ್’ವಾಟರ್ ದುಃಖ ತಡೆಯಲಾಗದೆ ಕಣ್ಣೀರಿಟ್ಟಿದ್ದಾನೆ.

Join Whatsapp