ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ, ಭಾರತೀಯ ವಿದ್ಯಾರ್ಥಿಗೆ ಚಾಕು ಇರಿತ, ಒಬ್ಬನ ಬಂಧನ

Prasthutha|

ಸಿಡ್ನಿ: ಭಾರತ ಮೂಲದ ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಅಮಾನುಷವಾಗಿ ಹಲ್ಲೆ ನಡೆಸಿ 11 ಬಾರಿ ಇರಿದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

- Advertisement -

ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ಪಿಎಚ್.ಡಿ. ಮಾಡುತ್ತಿರುವ 28ರ ಪ್ರಾಯದ ಶುಭಂ ಗಿಲ್ ಇರಿತಕ್ಕೊಳಗಾದ ವಿದ್ಯಾರ್ಥಿ. ಪೆಸಿಫಿಕ್ ಹೆದ್ದಾರಿಯಲ್ಲಿ ರಾತ್ರಿ 10.30 ಗಂಟೆಗೆ ತನ್ನ ಮನೆಗೆ ನಡೆದು ಬರುತ್ತಿದ್ದಾಗ ಈ ಚಾಕು ಹಲ್ಲೆ ನಡೆದಿದೆ. ಪ್ರಸ್ತುತ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಇದು ಜನಾಂಗೀಯ ದಾಳಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ

- Advertisement -

ಘಟನೆಗೆ ಸಂಬಂಧಿಸಿದಂತೆ 27ರ ಪ್ರಾಯದ ಡೇನಿಯಲ್ ನಾರ್ವುಡ್ ಎಂಬವನನ್ನು ಬಂಧಿಸಲಾಗಿದ್ದು, ಚಾಟ್ಸ್ ವುಡ್ ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಕೊಲೆಯತ್ನದ ಆರೋಪ ಹೊರಿಸಲಾಗಿದೆ. ಮುಂದಿನ ವಿಚಾರಣೆಯ ಡಿಸೆಂಬರ್ 14ರವರೆಗೆ ಆತನು ಕಸ್ಟಡಿಯಲ್ಲಿರುತ್ತಾನೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.

“2010ರ ಜನವರಿ 3ರಂದು ಜಾಗ್ರೋನ್ ಮೂಲದ ನಿತಿನ್ ಗಾರ್ಗ್ ಎಂಬ ವಿದ್ಯಾರ್ಥಿಯ ಮೇಲೆ ಮೆಲ್ಬೋರ್ನ್ ನಲ್ಲಿ ನಡೆದ ಚಾಕು ಹಲ್ಲೆಯಲ್ಲಿ ವಿದ್ಯಾರ್ಥಿ ಸಾವಿಗೀಡಾಗಿರುವುದು ನೆನಪಾಗುತ್ತಿದೆ. ಲುಧಿಯಾನಾದ ಸಂಸದನಾಗಿ ಕಾನೂನು ಕ್ರಮಕ್ಕೆ ನಾನು ಒತ್ತಾಯಿಸಿದೆ. ಇರಿದವನಿಗೆ 13 ವರುಷಗಳ ಜೈಲು ಶಿಕ್ಷೆಯಾಯಿತು. ಇವೆಲ್ಲ ಜನಾಂಗೀಯ ದಾಳಿಗಳು” ಮನೀಶ್ ತಿವಾರಿಯವರು ಹೇಳಿದರು.

ಈ ಸಂಬಂಧ ಸಿಡ್ನಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿರುವುದಾಗಿ ಆಗ್ರಾದ ಡಿಎಂ ನವನೀತ್ ಚಾಹಲ್ ತಿಳಿಸಿದ್ದಾರೆ.



Join Whatsapp