ಮಂಗಳೂರು ನಗರದಲ್ಲಿ  SDPI ನಾಯಕರ ವಿರುದ್ಧ ನಡೆಯುತ್ತಿರುವ ಪೊಲೀಸ್ ಬೇಟೆ ಅಕ್ಷಮ್ಯ: ಅಬ್ದುಲ್ ಮಜೀದ್ ಮೈಸೂರು

Prasthutha|

►ಪೊಲೀಸ್ ಕಾರ್ಯಾಚರಣೆಯ ವಿರುದ್ಧ ಪಕ್ಷದ ನಾಯಕರ ಆಕ್ರೋಶ

- Advertisement -

ಬೆಂಗಳೂರು: ಮಾನ್ಯ ಡಿಜಿಪಿಯವರೇ, ಎಸ್ ಡಿಪಿಐ ಎಂಬ ರಾಜಕೀಯ ಪಕ್ಷವನ್ನು ಗುರಿಪಡಿಸಿಕೊಂಡು ಮಂಗಳೂರು ನಗರದಲ್ಲಿ ನಡೆಯುತ್ತಿರುವ ಪೊಲೀಸ್ ಬೇಟೆ ಅಕ್ಷಮ್ಯ. ಇದು ಅನ್ಯಾಯ, ಅಕ್ರಮ ಮತ್ತು ಸಂವಿಧಾನ ಬಾಹಿರ. ಕೂಡಲೇ ಮಧ್ಯ ಪ್ರವೇಶಿಸಿ  ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಎಡಿಜಿಪಿ ಅವರನನ್ನು ಟ್ಯಾಗ್ ಮಾಡಿದ್ದಾರೆ.

- Advertisement -

SDPI ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ಇದೇ ವಿಷಯದಲ್ಲಿ ಟ್ವೀಟ್ ಮಾಡಿ, DGP Karnataka, ನಿಮ್ಮ ಪೊಲೀಸರು SDPI ಕಾರ್ಯಕರ್ತರನ್ನು, ನಾಯಕರನ್ನು ಬಂಧಿಸುತ್ತಿರುವುದು ನ್ಯಾಯವೇ? ಇದನ್ನು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಿದೆಯೇ. ಇದು ಸರಿಯೆಂದಾದರೆ ಅಣ್ಣಪ್ಪ ಸ್ವಾಮಿ ಮತ್ತು ಕಾನತ್ತೂರು ಸನ್ನಿಧಿಗೆ ಬಂದು ಸಮರ್ಥಿಸಲು ತಾವು ಮತ್ತು ತಮ್ಮ ಇಲಾಖೆ ತಯಾರಿದ್ದೀರಾ? ಎಂದು ಸವಾಲು ಹಾಕಿದ್ದಾರೆ.

ಎಸ್ ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿಲ್ಲ ಎಂಬ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿರುವ SDPI ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಸರ್ ಇದು FIR copy, ಇದರಲ್ಲಿರುವ ಅಬೂಬಕ್ಕರ್ ಕುಳಾಯಿ ಜಿಲ್ಲಾಧ್ಯಕ್ಷರು, ಜಲೀಲ್ ಕೃಷ್ಣಾಪುರ ರಾಜ್ಯ ಸಮಿತಿ ಸದಸ್ಯರು ಇವರ ಮನೆಗೆ 30ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ 3.45 ಕ್ಕೆ ಸುತ್ತುವರೆದಿರುವುದು ಸುಳ್ಳಾ ಸಾರ್…ಹಾಗಾದರೆ ಪೊಲೀಸರ ವೇಷದಲ್ಲಿ ಬೇರೆ ಯಾರಾದರೂ ಬಂದಿರಬಹುದೇ? ತಿಳಿಸಿ ಸಾರ್ ಎಂದು ಎಫ್ ಐಆರ್ ಪ್ರತಿಯನ್ನು ಟ್ವೀಟ್ ನಲ್ಲಿ ಲಗತ್ತಿಸಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ  ಅಫ್ಸರ್ ಕೊಡ್ಲಿಪೇಟೆ ಟ್ವೀಟ್ ಮಾಡಿ, ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿ 13 ವರ್ಷಗಳಲ್ಲಿ ನೂರಾರು ಜನಪ್ರತಿನಿಧಿಗಳನ್ನು ಹೊಂದಿರುವ, ಸಂವಿಧಾನದ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಸಮ ಸಮಾಜ ನಿರ್ಮಾಣ ಹಾಗೂ ಶೋಷಿತ ವರ್ಗಗಳ  ರಾಜಕೀಯ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಎಸ್ ಡಿಪಿಐ ಪಕ್ಷವನ್ನು ಗುರಿ ಪಡಿಸಿಕೊಂಡು ಕರ್ನಾಟಕದಲ್ಲಿ ನಡೆಯುತ್ತಿರುವ ಪೊಲೀಸ್ ಬೇಟೆಯ ವಿರುದ್ಧ @ceo_karnataka ಕೂಡಲೇ ಮಧ್ಯ ಪ್ರವೇಶಿಸಿ ನಮ್ಮ ಪಕ್ಷದ ನಾಯಕರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp