ಬಿಜೆಪಿ ಅಭ್ಯರ್ಥಿ ಪರ ಕ್ಯೂಆರ್ ಕೋಡ್ ಕೂಪನ್ ವಿತರಣೆ| ಮಂಗಳೂರು ಮೂಲದ ಆರೋಪಿಗಳು ಬಂಧನ

Prasthutha|

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರಿನಲ್ಲಿ ಕ್ಯೂಆರ್ ಕೋಡ್ ಕೂಪನ್ ವಿತರಣೆ ಮಾಡುತ್ತಿದ್ದ ಮಂಗಳೂರು ಮೂಲದ ಆರೋಪಿಗಳನ್ನು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡ ಬಂಧಿಸಿದೆ.

- Advertisement -

ಹೊಸಹಳ್ಳಿ ಗ್ರಾಮದಲ್ಲಿ ಅಪರಿಚಿತರು ಕ್ಯೂರ್ ಕೊಡ್ ಕೂಪನ್ ವಿತರಿಸುತ್ತಿರುವುದಾಗಿ ಕೆಲವು ಗ್ರಾಮಸ್ಥರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕೂಪನ್ ವಿತರಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಲವು ತಂಡಗಳಾಗಿ ಬಂದು ತಾಲೂಕಿನಾದ್ಯಂತ ಗ್ರಾಮಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರ ಕಡೆಯವರು ಎಂದು ಹೇಳಿ ಕಾರ್ಡ್ಗಳನ್ನು ವಿತರಣೆ ಮಾಡುತ್ತಿದ್ದರು.

ಮತ ಚೀಟಿಯಲ್ಲಿನ ಮಾಹಿತಿಯುಳ್ಳ ಕ್ಯೂಆರ್ ಕೋಡ್ ಹೊಂದಿರುವ ಕೂಪನ್ ಇದಾಗಿದೆ. ಸದ್ಯ ಡಿ.ರಾಜೇಶ್ವರಿ ನೇತೃತ್ವದ ಎಫ್ಎಸ್ಟಿ ತಂಡದಿಂದ ತನಿಖೆ ನಡೆಯುತ್ತಿದೆ.
ಬಂಧಿತರಿಂದ ಮತದಾರ ಪಟ್ಟಿ, ಹಂಚಲು ತಂದಿದ್ದ ನವ ದೊಡ್ಡಬಳ್ಳಾಪುರ ಹೆಸರಿನ ಕ್ಯೂಆರ್ ಕೋಡ್ ಕೂಪನ್ಗಳನ್ನು ವಶಕ್ಕೆ ಪಡೆಯಲಾಗಿದೆ.

- Advertisement -

ಹೊಸಹಳ್ಳಿ ಪೊಲೀಸ್ ಠಾಣೆಗೆ ಆರೋಪಿಗಳನ್ನು ಕರೆದೊಯ್ದ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.