ಕುವೈತ್: ಕೇರಳ ಮೂಲದ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Prasthutha|

ಕುವೈತ್ ಸಿಟಿ: ಕೇರಳ ಮೂಲದ ದಂಪತಿ ಕುವೈತ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

- Advertisement -

ಕೇರಳದ ಪತ್ತನಂತಿಟ್ಟ ಮೂಲದ ಸೈಜು ಸೈಮನ್ ಮತ್ತು ಅವರ ಪತ್ನಿ ಮೃತರು.

ಸಾಲ್ಮಿಯಾದಲ್ಲಿನ ಫ್ಲಾಟ್‌ನಿಂದ ಕೆಳಗೆ ಬಿದ್ದು ಸೈಜು ಮೃತದೇಹ ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಸೈಜುವಿನ ಪತ್ನಿಯ ಮೃತದೇಹ ಅಪಾರ್ಟ್‌ಮೆಂಟ್‌ನೊಳಗೆ ಪತ್ತೆಯಾಗಿದೆ.

- Advertisement -

ದಂಪತಿ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸೈಜು ಸೈಮನ್ ಅವರು ಆರೋಗ್ಯ ಸಚಿವಾಲಯದಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತ್ನಿ ಸಿಮ್ಸ್ ಶಾಲೆಯಲ್ಲಿ ಐಟಿ ಉದ್ಯೋಗಿಯಾಗಿದ್ದರು.