ಭಾರತದ ಉಪ ರಾಷ್ಟ್ರಪತಿ ಜೊತೆಗಿನ ಔತಣ ರದ್ದುಪಡಿಸಿದ ಕತರ್ ಆಡಳಿತಾಧಿಕಾರಿ : ಬಿಜೆಪಿ ಮುಖಂಡೆಯ ಪ್ರವಾದಿ ನಿಂದನೆ ಕಾರಣ?!

Prasthutha|

ದೋಹಾ: ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕತರ್ ಪ್ರವಾಸದಲ್ಲಿದ್ದು ಇಂದು ಮಧ್ಯಾಹ್ನ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾತಾಡುವುದಿತ್ತು. ಆದರೆ ಇದೀಗ ಕತರ್ ಉಪ ಆಡಲಿತಾಧಿಕಾರಿ ವೆಂಕಯ್ಯ ನಾಯ್ಡು ಜೊತೆಗಿನ ಔತಣಕೂಟವನ್ನು ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಕೋವಿಡ್ ಪಸರಿಸುವ ಭೀತಿ ಕಾರಣ ಈ ಭೋಜನ ಕೂಟವನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಈ ಬಗ್ಗೆ ಉಪ ರಾಷ್ಟ್ರಪತಿ ಕತರ್ ಪ್ರವಾಸಕ್ಕೂ ಮುನ್ನವೇ ಈ ಮಾಹಿತಿ ಅವರಿಗೆ ರವಾನಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಬಿಜೆಪಿ‌‌ ಮುಖಂಡೆ ನೂಪುರ್ ಶರ್ಮಾ ಪ್ರವಾದಿ ನಿಂದನೆ ಪ್ರಕರಣದಲ್ಲಿ ಭಾರತ ಅರಬ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾದದ್ದು ಸುಳ್ಳಲ್ಲ. ಕತರ್,ಕುವೈತ್, ಇರಾನ್ ಆಡಳಿತವು ಭಾರತೀಯ ರಾಯಭಾರಿಗಳಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದ್ದು ಅರಬ್ ರಾಷ್ಟ್ರಗಳು ಭಾರತದೊಂದಿಗೆ ಸೆಣಸಾಟಕ್ಕೆ ಸಿದ್ಧವಾಗುತ್ತಿದೆಯೋ ಎಂಬ ವಿಷಯ ಚರ್ಚೆಯಾಗುತ್ತಿದೆ



Join Whatsapp