ಕತಾರ್: 8 ಭಾರತೀಯ ಯೋಧರ ಪರ ಕ್ಯಾಸೇಶನ್ ಕೋರ್ಟ್‌ನಲ್ಲಿ ಮೊದಲ ಮನವಿ

Prasthutha|

ನವದೆಹಲಿ: ಕತಾರ್ ನಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬಳಿಕ ಡಿ.28 ರಂದು ಶಿಕ್ಷೆ ಬದಲಿಸಿ ಜೀವಾವಧಿಸಿ ಶಿಕ್ಷೆಗೆ ಈಡಾಗಿದ ಬಳಿಕ 8 ಮಂದಿ ಭಾರತೀಯ ಯೋಧರ ಪರವಾಗಿ ಮೊದಲ ಮನವಿ ಸಲ್ಲಿಸಲಾಗಿದೆ.

- Advertisement -

ಕೆಲವು ವಾರಗಳ ಕಾಲ ದೋಹಾದಲ್ಲಿದ್ದ ಯೋಧರ ಕುಟುಂಬ ಸದಸ್ಯರಲ್ಲಿ ಡಿಸೆಂಬರ್ 28 ರ ಬಳಿಕ ಬಹುತೇಕ ಸದಸ್ಯರು ಈಗ ಭಾರತಕ್ಕೆ ಮರಳಿದ್ದಾರೆ. ಮರಣದಂಡನೆಯನ್ನು ರದ್ದುಗೊಳಿಸಲಾಗಿದ್ದರೂ ಸಹ 8 ನೌಕಾ ಯೋಧರಿಗೆ ಮೂರು ವರ್ಷದಿಂದ 25 ವರ್ಷಗಳವರೆಗೆ ವಿವಿಧ ಹಂತಗಳಲ್ಲಿ ಜೈಲು ಶಿಕ್ಷೆಯನ್ನು ನೀಡಲಾಗಿದೆ.

8 ಯೋಧರಿಗೆ ಮತ್ತೊಂದು ಶಿಕ್ಷೆ ಘೋಷಣೆ ಮಾಡುವ ಮೊದಲು ಪ್ರಸ್ತುತ ಸಲ್ಲಿಸಲಾದ ಮೇಲ್ಮನವಿಯನ್ನು ಕ್ಯಾಸೇಶನ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತದೆ.

- Advertisement -

ಕೆಲವು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಕ್ಯಾಸೇಶನ್ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಇರುವ ಅತ್ಯುನ್ನತ ನ್ಯಾಯಾಲಯವಾಗಿದೆ. ಕ್ಯಾಸೇಶನ್ ನ್ಯಾಯಾಲಯಗಳು ಪ್ರಕರಣದ ಸತ್ಯಗಳನ್ನು ಮರು-ಪರಿಶೀಲಿಸುವುದಿಲ್ಲ. ಅವು ಸಂಬಂಧಿತ ಕಾನೂನನ್ನು ಮಾತ್ರ ಅರ್ಥೈಸುತ್ತವೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಶಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಕಮಾಂಡರ್ ಸಂಜೀವ್ ಗುಪ್ತಾ. ಆಗಸ್ಟ್ 30, 2022 ರಿಂದ ಕತಾರ್‌ನಲ್ಲಿ ಬಂಧನದಲ್ಲಿರುವ ಎಂಟು ನೌಕಾ ಯೋಧರಾಗಿದ್ದಾರೆ.

Join Whatsapp