ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪಿವಿ ಸಿಂಧು ಚಾಂಪಿಯನ್, ಪಣಯ್’ಗೆ ಕೈ ತಪ್ಪಿದ ಪ್ರಶಸ್ತಿ !

Prasthutha|

ಸ್ವಿಜರ್ಲ್ಯಾಂಡ್: ಸ್ವಿಸ್ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ವೀರೋಚಿತ ಹೋರಾಟ ತೋರಿದ ಎಚ್‌.ಎಸ್‌.ಪ‍್ರಣಯ್ ರನ್ನರ್‌ ಅಪ್ ಆದರು.

- Advertisement -

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಟೂರ್ನಿಯ ಸತತ ಎರಡನೇ ಆವೃತ್ತಿಯಲ್ಲಿ ಫೈನಲ್ ತಲುಪಿದ್ದರು. ಸೇಂಟ್‌ ಜಾಕಬ್‌ಶಾಲ್‌ ಕ್ರೀಡಾಂಗಣದಲ್ಲಿ ನಡೆದ 49 ನಿಮಿಷಗಳ ಹಣಾಹಣಿಯಲ್ಲಿ 21–16, 21–8ರಿಂದ ಭಾರತದ ಆಟಗಾರ್ತಿಗೆ ಗೆಲುವು ಒಲಿಯಿತು.
ಈ ಋತುವಿನಲ್ಲಿ ಸಿಂಧು ಗೆಲ್ಲುತ್ತಿರುವ ಎರಡನೇ ಸಿಂಗಲ್ಸ್ ಪ್ರಶಸ್ತಿ ಇದಾಗಿದೆ. ಜನವರಿಯಲ್ಲಿ ಲಖನೌ’ನಲ್ಲಿ ನಡೆದ ಸಯ್ಯದ್‌ ಮೋದಿ ಅಂತರಾಷ್ಟ್ರೀಯ ಸೂಪರ್ 300 ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

2021ರ ಆವೃತ್ತಿಯ ಫೈನಲ್‌ನಲ್ಲಿ ಸ್ಪೇನ್‌ನ ಕರೋಲಿನಾ ಮರಿನ್ ಎದುರು ಸೋತಿದ್ದ ಸಿಂಧು ಇಲ್ಲಿ ಕನಸು ನನಸಾಗಿಸಿಕೊಂಡರು. ಬಾಸೆಲ್‌ನಲ್ಲಿಯೇ ನಡೆದಿದ್ದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆಟಗಾರ್ತಿ ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೋಲಿಸಿ ಪ್ರಶಸ್ತಿ ಒಲಿಸಿಕೊಂಡಿದ್ದರು.

- Advertisement -

ಫೈನಲ್‌’ನಲ್ಲಿ ಎಡವಿದ ಪ್ರಣಯ್ !
ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿ ಟೂರ್ನಿಯೊಂದರ ಫೈನಲ್ ತಲುಪಿದ್ದ ಪ್ರಣಯ್ ಪ್ರಶಸ್ತಿ ಗೆಲುವಿನ ಆಸೆ ಈಡೇರಲಿಲ್ಲ.
ಫೈನಲ್‌ನಲ್ಲಿ ಅವರು ಏಷ್ಯನ್‌ ಗೇಮ್ಸ್ ಚಿನ್ನದ ಪದಕ ವಿಜೇತ, ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಎದುರು 12-21, 18-21 ಅಂಕಗಳ ಅಂತರದಲ್ಲಿ ಶರಣಾದರು.



Join Whatsapp