ಕೊರೋನಾ ಏರಿಕೆ ಹಿನ್ನೆಲೆ: ಚೀನಾದ ಶಾಂಘೈ ನಾಳೆಯಿಂದ ಮತ್ತೆ ಲಾಕ್ ಡೌನ್!

Prasthutha|

ಬೀಜಿಂಗ್ : ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ದಾಖಲೆಯ ಮಟ್ಟವನ್ನು ತಲುಪಿರುವುದರಿಂದ, ನಾಳೆಯಿಂದ ಹಂತಹಂತವಾಗಿ ಲಾಕ್‌ ಡೌನ್ ಜಾರಿ ಮಾಡಲು ನಿರ್ಧರಿಸಲಾಗಿದೆ. ಶಾಂಘೈ ನಗರದಲ್ಲಿ ಹೊಸ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ ಶೇ. 60 ಕ್ಕಿಂತ ಹೆಚ್ಚಿವೆ, ಹೆಚ್ಚಿದ ನಿರ್ಬಂಧಗಳ ನಡುವೆಯೂ ಸಹ ಸೋಂಕಿತರ ಸಂಖ್ಯೆ 1,600 ಕ್ಕೆ ಏರಿದೆ, ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಮಾರ್ಚ್ 1 ರಿಂದ ದೇಶದಲ್ಲಿ 56,000 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

- Advertisement -

ಜನರು ಮನೆಯಿಂದ ಹೊರಹೋಗುವುದನ್ನು ನಿಷೇಧಿಸಲಾಗುವುದು ಮತ್ತು ಸಾರ್ವಜನಿಕ ಸಾರಿಗೆ ಮತ್ತು ಕಾರು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಪರಿಸ್ಥಿತಿ ಹೊರತು ಖಾಸಗಿ ಕಾರುಗಳಿಗೆ ಅವಕಾಶ ಇರುವುದಿಲ್ಲ.

ಜಾಗತಿಕ ಹಡಗು ಹಬ್ ಆಗಿ ಶಾಂಘೈನ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಇದು ‘ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು’ ಎಂಬ ಆತಂಕದ ನಡುವೆ ಅಧಿಕಾರಿಗಳು ಈ ಹಿಂದೆ ನಗರವ್ಯಾಪಿ ಲಾಕ್ಡೌನ್ ಅನ್ನು ತಳ್ಳಿಹಾಕಿದ್ದರು.

Join Whatsapp