ಪುತ್ತೂರು | ಕಾರಿನ ಮೇಲೆ ಬಿದ್ದ ಮರ: ಪ್ರಯಾಣಿಕರು‌ ಅಪಾಯದಿಂದ ಪಾರು

Prasthutha|

ಪುತ್ತೂರು: ಕಾರಿನ ಮೇಲೆ ಮರವೊಂದು ಬಿದ್ದ ಘಟನೆ ಮಾಣಿಯ ಸಂಟ್ಯಾರ್ ಸೇತುವೆ ಬಳಿ ನಡೆದಿದೆ.‌

- Advertisement -

ಬುಧವಾರ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಮುರಿದು ಬಿದ್ದಿದೆ.

ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಭಾಗಶಃ ಜಖಂಗೊಂಡಿದೆ.

- Advertisement -

ಆತೂರು ನಿವಾಸಿ ಆಸಿಫ್ ಎಂಬವರು ಚಲಾಯಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದಿದ್ದು, ಅವರು ಕುಟುಂಬ ಸಮೇತರಾಗಿ ಕುಂಬ್ರಕ್ಕೆ ಆಗಮಿಸಿ ಹಿಂತಿರುಗಿ ಪುತ್ತೂರಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.

Join Whatsapp