ಪುತ್ತೂರು: “ಜಾಕಿ ಗ್ರೂಪ್ಸ್” ಸಂಸ್ಥೆಯ ಮಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ನೆಹರು ನಗರದಲ್ಲಿ ನಡೆದಿದೆ.
ಬನ್ನೂರು ನಿವಾಸಿ ಆಫಕ್ (37) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ನೆಹರುನಗರದ ಕಲ್ಲೇಗ ಮಸೀದಿ ಬಳಿಯ ಕೆಜೆಎಂ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಮಳಿಗೆ “ಜಾಕಿ ಗ್ರೂಪ್” ಮಾಲಕ ಆಫಕ್ ರವರು ಕೆಜೆಎಂ ಬಿಲ್ಡಿಂಗ್ ನ ಮೊದಲನೇ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಫಕ್ ರವರು ವಿವಾಹಿತರಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.