ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಸೇರಲಿದ್ದಾರೆ ನಟ ಪ್ರಕಾಶ್‌ ರೈ

Prasthutha|

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಯುತ್ತಿದ್ದು, ಈ ಮಧ್ಯೆ ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ಕೂಡ ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ.

- Advertisement -


ಚಿತ್ರದುರ್ಗ ಮಾರ್ಗದಲ್ಲಿ ಸಾಗುವ ಪಾದಯಾತ್ರೆಯಲ್ಲಿ ಪ್ರಕಾಶ್‌ ರೈ ಕಾಂಗ್ರೆಸ್‌ ಸೇರಲಿದ್ದು, ಕಾಂಗ್ರೆಸ್‌ ಸೈದ್ಧಾಂತಿಕ ಬದ್ಧತೆ ಮೆಚ್ಚಿ ಪಕ್ಷ ಸೇರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.


ಈ ಹಿಂದೆ ಪ್ರಕಾಶ್‌ ರೈ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಕಾಶ್‌ ರೈಗೆ ಎಎಪಿ ಬೆಂಬಲ ಸೂಚಿಸಿತ್ತು.

- Advertisement -


ಅಲ್ಲದೆ ಕಾಂಗ್ರೆಸ್‌ನ ಸಿದ್ಧಾಂತವನ್ನು ಮೆಚ್ಚಿ ಹಲವರು ಕಾಂಗ್ರೆಸ್‌ ಸೇರುತ್ತಿದ್ದಾರೆ.

Join Whatsapp