ಪುತ್ತೂರು:  ಪಟಾಕಿ ಗೋಡೌನ್ ಗೆ ಬೆಂಕಿ:  ಲಕ್ಷಾಂತರ ರೂ ನಷ್ಟ

Prasthutha|

ಪುತ್ತೂರು: ನಗರದ ದರ್ಬೆ ಭಾಗದಲ್ಲಿ ಕಾಂಪ್ಲೆಕ್ಸ್ ವೊಂದರ ನೆಲಮಹಡಿಯ ಗೋಡೌನ್ ನಲ್ಲಿ ಶೇಖರಿಸಿಟ್ಟ ಪಟಾಕಿಗೆ ಬೆಂಕಿ ತಗುಲಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.

- Advertisement -

ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ಆರಾಧ್ಯ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿದ್ದ ಪಟಾಕಿ ಗೋಡೌನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,  ಪಟಾಕಿ ಸಿಡಿಯುವ ಶಬ್ದಕ್ಕೆ ದರ್ಬೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ. ಮತ್ತು ಕಟ್ಟಡದಲ್ಲಿರುವ ಎಲ್ಲಾ ಅಂಗಡಿಯವರು ಬಂದ್ ಮಾಡಿ ಹೊರ ಓಡಿದ್ದಾರೆ.

ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಈ ಘಟನೆ ನಡೆದಿದೆಯೆಂಬ ಶಂಕೆ ವ್ಯಕ್ತವಾಗುತ್ತಿದ್ದು, ಇನ್ನೂ ನಿಖರವಾದ ಮಾಹಿತಿ ದೊರಕಿಲ್ಲ. ಮತ್ತು ಬೆಂಕಿ ತಗುಲಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ

- Advertisement -

ಮುಚ್ಚಲ್ಪಟ್ಟಿದ್ದ ಅಂಗಡಿಯಂತಿರುವ  ಕಾಂಪ್ಲೆಕ್ಸ್ ನ ಕಾರು ಪಾರ್ಕಿಂಗ್ ನಲ್ಲಿ ಇಷ್ಟು ಪ್ರಮಾಣದ ಪಟಾಕಿ ಶೇಖರಿಸಿ ಇಡಲು ಪರವಾನಿಗೆ ನೀಡಿದ್ದು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಪುತ್ತೂರು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Join Whatsapp