ಟೋಲ್ ಹೋರಾಟದ ಜೊತೆ ನಿಲ್ಲುವುದು ನ್ಯಾಯವಾದಿಗಳ ಕರ್ತವ್ಯ : ಎಸ್ ಪಿ ಚಂಗಪ್ಪ

Prasthutha|

ಮಂಗಳೂರು: ನಗರದ ಸುರತ್ಕಲ್ ಟೋಲ್ ಗೇಟ್ ವಿರುದ್ದ ನಡೆಯುತ್ತಿರುವ ಹೋರಾಟ ನಾಡಿನ ಎಲ್ಲಾ ಜನರನ್ನು ಸೆಳೆದಂತೆ ವಕೀಲರಾದ ನಮ್ಮನ್ನೂ ಆಕರ್ಷಿಸಿದ್ದು, ಟೋಲ್ ವಿರೋಧದ ಹೋರಾಟದ ಜೊತೆ ನಿಲ್ಲುವುದು ನ್ಯಾಯವಾದಿಗಳ ಕರ್ತವ್ಯ ಎಂದು ಹಿರಿಯ ನ್ಯಾಯವಾದಿ ಎಸ್ ಪಿ ಚಂಗಪ್ಪ ಹೇಳಿದ್ದಾರೆ.

- Advertisement -

ಎನ್ ಐಟಿಕೆ ಬಳಿಯ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಧರಣಿಯನ್ನು ಉದ್ದೇಶಿಸಿ ಮಾತಾಡಿದ ಚಂಗಪ್ಪ, ನ್ಯಾಯಾಲಯದ ಜವಾಬ್ದಾರಿಗಳಿಂದಾಗಿ ಇಡೀ ದಿನ ಹೋರಾಟದ ಜೊತೆ ಇರಲಾಗುತ್ತಿಲ್ಲ. ಆದರೆ ಹೋರಾಟಗಾರರಿಗೆ ವ್ಯವಸ್ಥೆಯಿಂದ ಕಾನೂನಿನ ತೊಂದರೆ ಆದರೆ ನಾವೆಲ್ಲ ತಕ್ಷಣ ಧಾವಿಸಿ ಬರುತ್ತೇವೆ. ಟೋಲ್ ಗೇಟ್ ಸುಲಿಗೆ ವಿರುದ್ದದ ಈ ಹೋರಾಟ ಗೆಲ್ಲಲೇಬೇಕು. ಕರಾವಳಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಈ ಹೋರಾಟದ ಗೆಲುವಿನಲ್ಲಿ ಉತ್ತರ ಇದೆ ಎಂದು ಹೇಳಿದರು.

ಧರಣಿಯ ಐದನೇ ದಿನವಾದ ಇಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಬೆಳಿಗ್ಗೆಯ ಧರಣಿಯಲ್ಲಿ ಉಡುಪಿ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಯೂನಿಯನ್ ನವರು, ಬಂಟ್ವಾಳ ಸಮಾನ ಮನಸ್ಕ ಸಂಘಟನೆಯ ಸದಸ್ಯರುಗಳು, ಮಧ್ಯಾಹ್ನ ಜನಪರ ವಕೀಲರ ಗುಂಪು, ಎಸ್ಎಫ್ಐ, ಡಿವೈಎಫ್ಐ ಕಾರ್ಯಕರ್ತರು ಭಾಗಿಗಳಾದರು.

Join Whatsapp