ಪುತ್ತೂರು ನಗರಸಭೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್, ಬಿಜೆಪಿ ಸಮಬಲ

Prasthutha|

- Advertisement -

ಪುತ್ತಿಲ ಪರಿವಾರಕ್ಕೆ ಮುಖಭಂಗ

ಪುತ್ತೂರು: ನಗರ ಸಭೆಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್ 1ರಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ ಹಾಗೂ ವಾರ್ಡ್ -11ರಲ್ಲಿ ಬಿಜೆಪಿಯ ರಮೇಶ್ ರೈ ಹಾಗೂ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಪುತ್ತಿಲ ಪರಿವಾರಕ್ಕೆ ಮುಖಭಂಗವಾಗಿದೆ.

- Advertisement -

ವಾರ್ಡ್ 1ರಲ್ಲಿ ಚಲಾವಣೆಯಾದ ಒಟ್ಟು 958 ಮತಗಳಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ 427, ಬಿಜೆಪಿಯ ಸುನೀತಾ 219 ಹಾಗೂ ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ ನ ದಿನೇಶ್ ಶೇವಿರೆ 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ವಾರ್ಡ್ 11 ರಲ್ಲಿ ಬಿಜೆಪಿಯ ರಮೇಶ್ ರೈ 431, ಕಾಂಗ್ರೆಸ್ ನ ದಾಮೋದರ ಭಂಡಾ‌ರ್ ಕರ್ 400, ಪುತ್ತಿಲ ಪರಿವಾರದ ಚಿಂತನ್ 216 ಮತಗಳನ್ನು ಪಡೆದು ಕೊಂಡಿದ್ದಾರೆ. ಬಿಜೆಪಿ ರಮೇಶ್ ರೈ 31 ಮತಗಳ ಅಂತದಲ್ಲಿ ಜಯಗಳಿಸಿದ್ದಾರೆ.

Join Whatsapp