ಪುಟಿನ್ ಮುಂದೊಂದು ದಿನ ಭಾರೀ ಬೆಲೆ ತೆರಬೇಕಾಗುತ್ತದೆ: ಅಮೆರಿಕಾ ಅಧ್ಯಕ್ಷ ಬೈಡನ್ ಎಚ್ಚರಿಕೆ

Prasthutha|

ವಾಷಿಂಗ್ಟನ್: ಉಕ್ರೇನ್ ವಿರದ್ಧ ಸಮರ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದೊಂದು ದಿನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಎಚ್ಚರಿಕೆ ನೀಡಿದ್ದಾರೆ.

- Advertisement -

ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಜೋ ಬೈಡನ್, ರಷ್ಯಾದ ಸರ್ವಾಧಿಕಾರಿ ಬೇರೊಂದು ದೇಶ(ಯೂಕ್ರೇನ್)ವನ್ನು ಆಕ್ರಮಿಸಿದ್ದು, ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು​ ಎಚ್ಚರಿಸಿದರು.

ಯೂರೋಪ್​ ಅನ್ನು ಇಭ್ಭಾಗ ಮಾಡಬಹುದು ಎಂದು ಪುಟಿನ್ ತಿಳಿಸಿದ್ದಾರೆ. ಆದರೆ, ಅದು ತಪ್ಪು. ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ನಡುವಿನ ಯುದ್ಧದಲ್ಲಿ ಪ್ರಜಾಪ್ರಭುತ್ವವೂ ಉದಯಿಸುತ್ತಿದೆ ಮತ್ತು ಇಡೀ ವಿಶ್ವವು ಶಾಂತಿ ಮತ್ತು ಭದ್ರತೆಯನ್ನು ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.



Join Whatsapp