ಉಡುಪಿ | KSRTC ಬಸ್ ಡಿಕ್ಕಿ: ತಂದೆ, ಮಗಳು ಮೃತ್ಯು

Prasthutha|

ಉಡುಪಿ : ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿದೆ.

- Advertisement -

ಗಾಯತ್ರಿ ಪ್ಯೆ, ತಂದೆ ಗಣೇಶ್ ಪ್ಯೆ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬುಧವಾರ ಮುಂಜಾನೆ ಈ ಅಪಘಾತ ನಡೆದಿದೆ. ಮಗಳು ಗಾಯತ್ರಿ ಹುಬ್ಬಳ್ಳಿಯಿಂದ ಆಗಮಿಸಿದ್ದು, ಇವರನ್ನು ಕರೆದುಕೊಂಡು ಹೋಗಲು ತಂದೆ ಟಿ.ಗಣೇಶ್ ಪ್ಯೆ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಬಳಿಕ ಮನೆಗೆ ಹಿಂತಿರುಗುವ ವೇಳೆ ಉಡುಪಿಯಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರ ಗಾಯಗೊಂಡ ಗಣೇಶ್ ಪ್ಯೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಎಂದು ತಿಳಿದು ಬಂದಿದೆ.

- Advertisement -

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp