ಪುಟಿನ್‌ ತಮ್ಮ ಸಲಹೆಗಾರರನ್ನು ಗೃಹ ಬಂಧನದಲ್ಲಿರಿಸಿರಬಹುದು: ಬೈಡನ್ ಟೀಕೆ

Prasthutha|

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ತಮ್ಮ ಕೆಲವು ಸಲಹೆಗಾರರನ್ನು ಗೃಹ ಬಂಧನದಲ್ಲಿರಿಸಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ.

- Advertisement -

ಪುಟಿನ್‌ಗೆ ತಮ್ಮ ಸಿಬ್ಬಂದಿಯಿಂದ ಯುದ್ಧಪೀಡಿತ ಉಕ್ರೇನ್‌ ನಲ್ಲಿನ ಸವಾಲುಗಳ ಬಗ್ಗೆ ಸರಿಯಾದ ಮಾಹಿತಿ ದೊರಕುತ್ತಿಲ್ಲ ಎಂದು ಬ್ರಿಟನ್ ಮತ್ತು ಯುಎಸ್‌ ಗುಪ್ತಚರ ಮೂಲಗಳು ತಿಳಿಸಿವೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬೈಡನ್‌, ಪುಟಿನ್ ಸ್ವತಃ ಪ್ರತ್ಯೇಕವಾಸದಲ್ಲಿ ಉಳಿದಿರಬಹುದು. ಇಲ್ಲವೇ ತಮ್ಮ ಸಲಹೆಗಾರರಲ್ಲಿ ಕೆಲವರನ್ನು ಗೃಹ ಬಂಧನಕ್ಕೆ ಒಳಪಡಿಸಿರುವ ಸಾಧ್ಯತೆ ಇದೆ. ಅಥವಾ ವಜಾ ಮಾಡಿರಬಹುದು ಎಂದು ಹೇಳಿದ್ದಾರೆ.

- Advertisement -

ರಷ್ಯಾ ಸೇನೆಯು ಫೆಬ್ರವರಿ 24ರಂದು ಆರಂಭಿಸಿದ ಉಕ್ರೇನ್‌ ಮೇಲಿನ ಆಕ್ರಮಣವನ್ನು ರಷ್ಯಾ ಅಧ್ಯಕ್ಷ ಪುಟಿನ್ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎಂದು ಕರೆದರೆ, ಪುಟಿನ್‌ ಅಪ್ರಚೋದಿತ ಆಕ್ರಮಣ ಆರಂಭಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

Join Whatsapp