ಪಂಜಾಬಿಯನ್ನು ಕಾಶ್ಮೀರದ ಆರನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು: ರಾಜ್ಯಸಭೆಯಲ್ಲಿ ಚರ್ಚೆ ಕೋರಿ ಅಕಾಲಿ ದಳ

Prasthutha|

ನವದೆಹಲಿ: ಪಂಜಾಬಿಯನ್ನು ಜಮ್ಮು ಮತ್ತು ಕಾಶ್ಮೀರದ ಆರನೇ ಅಧಿಕೃತ ಭಾಷೆಯಾಗಿ ಅಂಗೀಕರಿಸಬೇಕೆಂದು ಕೋರಿ ಅಕಾಲಿ ದಳದ ನಾಯಕ ಸರ್ದಾರ್ ಸುಖ್ ದೇವ್ ಸಿಂಗ್ ದಿಂಡ್ಸಾ ರಾಜ್ಯಸಭೆಗೆ ನೋಟೀಸು ನೀಡಿ ಶೂನ್ಯ ವೇಳೆಯಲ್ಲಿ ಚರ್ಚಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಪೂರ್ವ ಭಾರತದಲ್ಲಿ ಗೋಹತ್ಯೆ ಕುರಿತು ಗಂಭೀರ ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಮತ್ತೊಂದು ನೋಟೀಸು ನೀಡಲಾಗಿದೆ. ಬಿಜೆಪಿಯ ಮಹೇಶ್ ಪೋಡರ್ ಈ ನೋಟೀಸು ನೀಡಿರುವುದು. ಪರಿಸರ ಪರಿಣಾಮ ಅಧ್ಯಯನ ಕರಡು ಅಧಿಸೂಚನೆಯನ್ನು ಚರ್ಚಿಸಲು ಕೋರಿ ಡಿಎಂಕೆ ಮತ್ತೊಂದು ನೋಟೀಸು ನೀಡಿದೆ.

- Advertisement -

ಕೋವಿಡ್ ಮಹಾಮಾರಿ ಆರಂಭದ ನಂತರ ಮುಂದೂಡಲ್ಪಟ್ಟ ರಾಜ್ಯಸಭಾ ಅಧಿವೇಶನ ಸೋಮವಾರ ಪುನಾರಂಭವಾಯಿತು. ಸಭೆ ಅಕ್ಟೋಬರ್ 1ರಂದು ಕೊನೆಗೊಳ್ಳಲಿದೆ.



Join Whatsapp