ಪ್ರಧಾನಿ ಮೋದಿ ಜನ್ಮದಿನಕ್ಕೆ ನಿರುದ್ಯೋಗಿಗಳ ಸ್ಪೆಶಲ್ ಗಿಫ್ಟ್ | ಟ್ವಿಟರ್ ನಲ್ಲಿ #National_Unemployment_Day ಟಾಪ್ ಟ್ರೆಂಡಿಂಗ್ !

Prasthutha|

➤ ‘ರಾಷ್ಟ್ರೀಯ ನಿರುದ್ಯೋಗ ದಿನ’ ಹ್ಯಾಶ್ ಟ್ಯಾಗ್ ವ್ಯಾಪಕ ವೈರಲ್

- Advertisement -


ನವದೆಹಲಿ : ಪ್ರಧಾನಿ ಮೋದಿ ನರೇಂದ್ರ ಮೋದಿ ಅವರ ಜನ್ಮ ದಿನಕ್ಕೆ ದೇಶಾದ್ಯಂತ ಯುವಕರು ಭಾರೀ ಮುಖಭಂಗವಾಗುವಂತಹ ಉಡುಗೊರೆ ನೀಡಿದ್ದು, ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಟ್ವೀಟ್ ಮಾಡುವ ಮೂಲಕ ಟಾಪ್ ಟ್ರೆಂಡ್ ಸೃಷ್ಟಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಟ್ವಿಟರ್ ಹಾಗೂ ಫೇಸ್ ಬುಕ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು #National_Unemployment_Day ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ಪ್ರತಿಭಟಿಸಲು ಕರೆ ನೀಡಲಾದ ಪೋಸ್ಟ್ ಗಳು ಹರಿದಾಡಿದ್ದವು. ಒಟ್ಟು 30 ಲಕ್ಷಕ್ಕೂಅಧಿಕ ಟ್ವೀಟ್ ಗಳು ಹಿಂದಿ ಮತ್ತು ಇಂಗ್ಲಿಷ್ ಗಳಲ್ಲೇ  ದಾಖಲಾಗಿದೆ. ಬೇರೆ ಬೇರೆ ಭಾಷೆಗಳಲ್ಲೂ ಇದೇ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

ಇದೀಗ ಇಂದು ಮುಂಜಾನೆಯಿಂದಲೇ #National_Unemployment_Day ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ನಂ.1 ಟ್ರೆಂಡಿಂಗ್ ಸ್ಥಾನಕ್ಕೆ ಬಂದಿದೆ. ಜಾಗತಿಕ ಟ್ರೆಂಡಿಂಗ್ ನಲ್ಲೂ ಮೋದಿ ಜನ್ಮ ದಿನಕ್ಕೆ, ನಿರುದ್ಯೋಗ ಕುರಿತ ವಿಬಂಡನಾತ್ಮಕ ಹ್ಯಾಶ್ ಟ್ಯಾಗ್ ಗಮನ ಸೆಳೆದಿದೆ. ಇದು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಗೆ ಅತ್ಯಂತ ಮುಜುಗರ ತರುವ ವಿಷಯವಾಗಿದೆ.

- Advertisement -

ಈ ವರದಿ ಸಿದ್ಧಪಡಿಸುವಾಗ, #National_Unemployment_Day ಹ್ಯಾಶ್ ಟ್ಯಾಗ್ ಬಳಸಿ 20 ಲಕ್ಷ 43 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ನಂತರದ ಸ್ಥಾನದಲ್ಲಿ #राष्ट्रीयबेरोजगारीदिवस (ರಾಷ್ಟ್ರೀಯ ನಿರುದ್ಯೋಗ ದಿನ) ಎಂಬ ಹ್ಯಾಶ್ ಟ್ಯಾಗ್ ಹಿಂದಿಯಲ್ಲಿ ಟ್ರೆಂಡ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಈ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ, ಪ್ರಧಾನಿ ಮೋದಿಯವರ ಜನ್ಮ ದಿನಾಚರಣೆಗೆ ಶುಭಕೋರಿದವರ ಟ್ವೀಟ್ ಗಳೂ ಟ್ರೆಂಡಿಂಗ್ ನಲ್ಲಿದ್ದರೂ, ಟ್ವೀಟ್ ಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ. #HappyBirthdayPMModi ಹ್ಯಾಶ್ ಟ್ಯಾಗ್ ಕೇವಲ 2 ಲಕ್ಷ 93 ಸಾವಿರ ಮಂದಿಯಿಂದ ಮಾತ್ರ ಬಳಸಲ್ಪಟ್ಟಿದೆ. ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಕೋರಿದವರ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದರೂ, ನಿರುದ್ಯೋಗವನ್ನು ಉಲ್ಲೇಖಿಸಿ ಮಾಡಲಾದ ಟ್ವೀಟ್ ಗಳ ಸಂಖ್ಯೆ ಅಜಗಜಾಂತರ ವ್ಯತ್ಯಾಸವನ್ನು ಕಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಪ್ರಧಾನಿ ಮೋದಿ ವಿರುದ್ಧ ಯುವ ಜನತೆ ತಿರುಗಿಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ಅವರು ಮಾಡಿದ್ದ ಭಾಷಣಗಳ ವೀಡಿಯೊಗಳು ಯೂಟ್ಯೂಬ್ ನಲ್ಲಿ ಭಾರಿ ಡಿಸ್ ಲೈಕ್ ಪಡೆಯುವ ಮೂಲಕ ಗಮನ ಸೆಳೆದಿತ್ತು. ಪ್ರಧಾನಿಯವರು ಮಾಡಿದ್ದ ‘ಮನ್ ಕೀ ಬಾತ್’ ಭಾಷಣದ ವೀಡಿಯೊಗೆ ಯೂಟ್ಯೂಬ್ ನಲ್ಲಿ ಬಿಜೆಪಿಯ ಖಾತೆಯಲ್ಲೇ 10 ಲಕ್ಷಕ್ಕೂ ಹೆಚ್ಚು ಡಿಸ್ ಲೈಕ್ ಗಳು ವ್ಯಕ್ತವಾಗಿದ್ದವು. ಇದರಿಂದಲೂ ಪ್ರಧಾನಿ ಮೋದಿ ಮತ್ತು ಬಿಜೆಪಿಗರು ಭಾರಿ ಮುಖಭಂಗ ಎದುರಿಸಬೇಕಾಗಿ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ಮೋದಿಯವರಿಗೆ ಇಂತದ್ದೊಂದು ಸವಾಲು ಎದುರಾಗಿರುವುದನ್ನು ಬಿಜೆಪಿಗರು ಎಂದೂ ನಿರೀಕ್ಷಿಸಿರಲಾರರು.  

Join Whatsapp