ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆ| ಆಮ್ ಆದ್ಮಿ ಕೈ ಹಿಡಿದ ಹಿರಿಯ ನಾಯಕ

Prasthutha|

ಗುರುದಾಸ್ ಪುರ: ಪಂಜಾಬ್ನಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆಯಾಗಿದೆ. ಹಿರಿಯ ನಾಯಕ ರಮಣ್ ಬಹ್ಲ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ರಮಣ್ ಮಜ್ಹಾ ಕ್ಷೇತ್ರದ ಪ್ರಭಾವೀ ನಾಯಕರಾಗಿದ್ದಾರೆ.

- Advertisement -

ಹಿಂದೂ ಸಮುದಾಯದ ನಾಯಕನೆಂದು ಗುರುತಿಸಿಕೊಂಡಿದ್ದ ರಮಣ್ ಅವರ ನಿರ್ಗಮನವು ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ರಮಣ್ ಅವರು ಪಂಜಾಬ್ ರಾಜ್ಯ ಅಧೀನ ಸೇವೆಗಳ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿದ್ದರು.

2017ರ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲದ ಆಮ್ ಆದ್ಮಿ ಪಕ್ಷ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆ.

- Advertisement -

ಮಾಜಿ ಸಚಿವ ಮತ್ತು ಗುರುದಾಸ್‌ ಪುರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಖುಶಾಲ್ ಬಹ್ಲ ಅವರ ಪುತ್ರ ರಮಣ್ ಅವರು ಎರಡು ಬಾರಿ ಗುರುದಾಸ್‌ ಪುರ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು.

ತನ್ನ ಕುಟುಂಬದ ಮೂರು ತಲೆಮಾರುಗಳು ಕಾಂಗ್ರೆಸ್‌ ನಲ್ಲಿದ್ದರೂ ಈಗ ಕಾಂಗ್ರೆಸ್ ಪಕ್ಷವು ದೊಡ್ಡ ಬಿಟ್ಟು ಎದುರಿಸುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೀತಿಯು ಪಂಜಾಬ್ ಅನ್ನು ಮುನ್ನಡೆಸಲಿದೆ.

ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರ ವಿರೋಧಿ ನೀತಿ, ದೆಹಲಿಯ ಅಭಿವೃದ್ಧಿ ಮಾದರಿ ಮತ್ತು ಕೇಜ್ರಿವಾಲ್ ಅವರ ದೂರದೃಷ್ಟಿಯ ಪ್ರಭಾವದಿಂದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ರಮಣ್ ಹೇಳಿದ್ದಾರೆ.

Join Whatsapp