ಭಾರತದಲ್ಲಿ 300 ಪಟ್ಟು ಹೆಚ್ಚಾದ ದ್ವೇಷದ ಬರಹಗಳು| ಕ್ರಮ ಕೈಗೊಳ್ಳದ ಫೇಸ್ಬುಕ್

Prasthutha|

ಹೊಸದಿಲ್ಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ದ್ವೇಷದ ಬರಹಗಳು ಅಪಾಯಕಾರಿಯಾಗಿ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

- Advertisement -

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ದ್ವೇಷದ ಬರಹಗಳು ಹೆಚ್ಚುತ್ತಿದೆ ಎಂದು ಸ್ವತಃ ಫೇಸ್ ಬುಕ್ ನಡೆಸಿದ ಆಂತರಿಕ ಸಂಶೋಧನೆಯಿಂದ ತಿಳಿದುಬಂದಿದೆ.
ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಭಾಷೆಗಳ ಪೋಸ್ಟ್‌ಗಳಲ್ಲಿ ದ್ವೇಷದ ಬರಹಗಳು ವ್ಯಾಪಕವಾಗಿ ಹೆಚ್ಚುತ್ತಿದೆ.
2020 ರ ಆರಂಭದ ವೇಳೆಗೆ, ಫೇಸ್ಬುಕ್ನಲ್ಲಿ ದ್ವೇಷದ ಬರಹಗಳ ಸಂಖ್ಯೆ 300 ಪಟ್ಟು ಹೆಚ್ಚಾಗಿದೆ ಎಂದು ಡೇಟಾ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಡಿಸೆಂಬರ್ 2019 ಮತ್ತು ಜನವರಿ 2020 ರಲ್ಲಿ ಅತಿ ಹೆಚ್ಚು ದ್ವೇಷದ ಪ್ರಚಾರಗಳು ನಡೆದಿದ್ದು, ಸಂಘಪರಿವಾರವು ಪೌರತ್ವ ಚಳವಳಿಯ ವಿರುದ್ಧ ವ್ಯಾಪಕ ಪ್ರಚಾರ ನಡೆಸಿತ್ತು ಎಂದು ತಿಳಿದುಬಂದಿದೆ.

- Advertisement -

ಮುಸ್ಲಿಂ ವಿರೋಧಿ ಪೋಸ್ಟ್‌ಗಳು, ಕೋಮುವಾದಿ ಟೀಕೆಗಳು ಮತ್ತು ಗಲಭೆಗಳಿಗೆ ಪ್ರಚೋದಿಸುವ ಬರಹಗಳು ಫೇಸ್‌ಬುಕ್ ಪುಟಗಳಲ್ಲಿ ತುಂಬಿದ್ದವು.

ಮುಸ್ಲಿಮರನ್ನು ಹತ್ಯೆಗೈಯ್ಯುವುದಾಗಿ ಸಾರ್ವಜನಿಕವಾಗಿ ಕರೆ ನೀಡುವ ಬಿಜೆಪಿ ನಾಯಕರ ಭಾಷಣಗಳು ಫೇಸ್ಬುಕ್ ನಲ್ಲಿ ಹರಡುತ್ತಿದ್ದವು. ಇಂತಹ ಕೋಮುವಾದಿ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಫೇಸ್‌ಬುಕ್ ವಿಪಲವಾಗಿದೆ ಎಂದು ತಂತ್ರಜ್ಞರು ಮತ್ತು ಫೇಸ್‌ಬುಕ್ ನ ಮಾಜಿ ಉದ್ಯೋಗಿಗಳು ಬಹಿರಂಗಪಡಿಸಿದ್ದಾರೆ.

Join Whatsapp