ಭ್ರಷ್ಟಾಚಾರ ಆರೋಪ: ಆರೋಗ್ಯ ಸಚಿವ ವಿಜಯ್ ಸಿಂಗ್ಲಾರನ್ನು ವಜಾಗೊಳಿಸಿದ ಪಂಜಾಬ್ ಸರಕಾರ

Prasthutha|

ಪಂಜಾಬ್‌ : ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳಿದ್ದ ಪಂಜಾಬ್‌ನ ಎಎಪಿ ಸರ್ಕಾರದ ವಿರುದ್ಧ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಆರೋಗ್ಯ ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ.

- Advertisement -

ಬುಧವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭ್ರಷ್ಟಾಚಾರದ ದೂರುಗಳ ಹಿನ್ನಲೆಯಲ್ಲಿ ಆರೋಗ್ಯ ಸಚಿವ ವಿಜಯ್ ಸಿಂಗ್ಲಾರನ್ನು ವಜಾಗೊಳಿಸಿದ್ದಾರೆ. ಗುತ್ತಿಗೆ ಅಧಿಕಾರಿಗಳಿಂದ ಶೇ.1ರಷ್ಟು ಕಮೀಷನ್ ಕೇಳುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಂಗ್ಲಾ ವಿರುದ್ಧದ ಆರೋಪಕ್ಕೆ ಖಚಿತವಾದ ಸಾಕ್ಷಿ ದೊರಕಿದ್ದು ಪಂಜಾಬ್ ಸಿಎಂ ಭಗವಂತ್‌ ಮಾನ್‌ ಈ ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸಂದೇಶದಲ್ಲಿ, ಸಿಂಗ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಮಾನ್ ಹೇಳಿದರು . ಡಾ. ಸಿಂಗ್ಲಾ ಅಪರಾಧವನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಈ ವಜಾದ ಮೂಲಕ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಮಾನ್ ಹೇಳಿದರು.



Join Whatsapp