ಕುತುಬ್ ಮಿನಾರ್ ನಲ್ಲಿ ಆರಾಧನೆಗೆ ಅವಕಾಶ ಕೊಡುವುದಿಲ್ಲ: ಪುರಾತತ್ವ ಇಲಾಖೆ

Prasthutha|

ನವದೆಹಲಿ: ಕುತುಬ್ ಮಿನಾರ್ ಕಟ್ಟುವಾಗ ಕೆಲವು ಹಿಂದೂ ದೇವರ ಕಲ್ಲುಗಳನ್ನೂ, ಕೆತ್ತನೆಗಳನ್ನೂ ಸೇರಿಸಲಾಗಿದೆ. ಕುತುಬ್ ಮಿನಾರ್ ಸಂರಕ್ಷಿತ ಚಾರಿತ್ರಿಕ ಗುರುತು ಆಗಿರುವುದರಿಂದ ಅದರ ರಕ್ಷಣೆಗೆ ಬೇಕಾದ ವ್ಯವಸ್ಥೆ ಇದೆ. ಕುತುಬ್ ಮಿನಾರ್ ನೊಳಗೆ ಆರಾದನೆ ಇಲ್ಲ. ಮುಂದೆಯೂ ಅದಕ್ಕೆ ಅವಕಾಶ ಕೊಡುವುದಿಲ್ಲ. ಅದು ಮೂಲಭೂತ ನೀತಿಯಾಗಿದ್ದು ಅದನ್ನು ಯಾರಿಗೂ ಮುರಿಯಲು ಅವಕಾಶವಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ- ಎಎಸ್ ಐ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.

- Advertisement -


“ ಈ ನೆಲದ ನಿಯಮಾವಳಿ ಮುರಿಯುವುದಕ್ಕಾಗಿ ಮೂಲಭೂತ ಹಕ್ಕು ಬಳಸಲು ಅವಕಾಶವಿಲ್ಲ. 1958ರ ಎಎಂಎಎಸ್ ಆರ್- ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ನೆಲೆಗಳು ಮಿಕ್ಕುಳಿದವು ಕಾಯ್ದೆಯಂತೆ ನಮ್ಮ ಮೂಲ ಕೆಲಸ ರಕ್ಷಣೆ ಮತ್ತು ಕಾಪಾಡುವುದಾಗಿದೆ. ಅಲ್ಲಿ ಬೇರೆ ಯಾವುದೇ ಪದ್ಧತಿಗೆ ಅವಕಾಶ ನೀಡಲು ಅವಕಾಶವಿಲ್ಲ. ಒಂದು ಸ್ಮಾರಕವು ರಕ್ಷಣೆಯ ಸುಪರ್ದಿಯಲ್ಲಿ ಇರುವಾಗ ಅಲ್ಲಿ ಪೂಜೆಗೆ ಅವಕಾಶ ಕೊಡುವುದಿಲ್ಲ” ಎಂದು ಎಎಸ್ ಐ ಕೋರ್ಟಿಗೆ ಲಿಖಿತ ಹೇಳಿಕೆ ನೀಡಿದೆ.
ಸಾಕೇತ್ ಜಿಲ್ಲಾ ಕೋರ್ಟಿನಲ್ಲಿ ಹೆಚ್ಚುವರಿ ಜಿಲ್ಲಾ ಜಡ್ಜ್ ನಿಖಿಲ್ ಚೋಪ್ರಾರಿಗೆ ಲಿಖಿತವಾಗಿ ಎಎಸ್ ಐ ಈ ಉತ್ತರ ನೀಡಿದೆ.


ಕುತುಬ್ ಮಿನಾರ್ ಸಮುಚ್ಚಯದಲ್ಲಿ ಇರುವ 27 ದೇವಾಲಯಗಳನ್ನು ಪುನರುಜ್ಜೀವಗೊಳಿಸುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯವಾಗಿ ವೃಷಭದೇವ ಬಸದಿ ಮತ್ತು 27 ಜೈನ ಮತ್ತು ಹಿಂದೂ ದೇವ ಗುಡಿಗಳು ಇಲ್ಲಿದ್ದವು ಎನ್ನಲಾಗಿದೆ. ಅರ್ಜಿದಾರರು ಕ್ರಮ ಪ್ರಕಾರ ಆರಾಧನೆಗೆ ಅವಕಾಶ ಮಾಡಿ ಕೊಡಬೇಕು ಎಂದು ಕೇಳಿದ್ದರು. ಕುತುಬ್ ಮಿನಾರ್ ಸಮುಚ್ಚಯದಲ್ಲಿ ಗುಡಿ ಬಸದಿಗಳು ಇದ್ದವಾದರೂ ಈಗ ಇವೆಲ್ಲ 1958ರ ಎಎಂಎಎಸ್ ಆರ್ ಕಾಯ್ದೆಯಡಿ ಬರುತ್ತವೆ. ಕುವ್ವತುಲ್ ಇಸ್ಲಾಂ ಮಸೀದಿಯಲ್ಲಿ 27 ಆಲಯಗಳ ಕಂಬಗಳಿತ್ಯಾದಿ ಕಟ್ಟಲು ಬಳಸಿಕೊಂಡ ಉಲ್ಲೇಖವಿದೆ ಎಂದೂ ಎಎಸ್ ಐ ಹೇಳಿದೆ.

- Advertisement -


ಮಿನಾರ್ ಕಟ್ಟುವಾಗ ಕಲ್ಲುಗಳನ್ನು ಕ್ರಮ ಪ್ರಕಾರ ಬಳಸಿಲ್ಲವಾದ್ದರಿಂದ ಕೆಲವು ಕಡೆ ಮೂರ್ತಿಗಳು ಅಡಿ ಮೇಲಾದಂತೆ ಇವೆ.
“ಗಣೇಶನ ಒಂದು ಮೂರ್ತಿಯು ಗೋಡೆಯ ತಳ ಸಾಲಿನಲ್ಲಿ ಇದೆ. ಅಲ್ಲಿಗೆ ಯಾರೂ ಹೋಗದಂತೆ ಕಬ್ಬಿಣದ ತಡೆಬೇಲಿ ಇದೆ. 2001ರಿಂದ ಈ ಗ್ರಿಲ್ ಹಾಕಲಾಗಿದೆ”ಎಂದು ಎಎಸ್ ಐ ಹೇಳಿತು. ಇದು ಗೋಡೆಯ ತಳದಲ್ಲಿ ಸೇರಿಕೊಂಡಿರುವುದರಿಂದ ಅದನ್ನು ತೆಗೆಯುವುದು ಇಲ್ಲವೇ ಮರು ಹೊಂದಿಸುವುದು ಮಿನಾರಿಗೆ ಅಪಾಯಕಾರಿ ಎಂದೂ ಅದು ಸ್ಪಷ್ಟಪಡಿಸಿದೆ.

Join Whatsapp