ಲಖಿಂಪುರ ಹಿಂಸಾಚಾರಕ್ಕೆ ಒಂದು ವರ್ಷ: ಪಂಜಾಬ್’ನಲ್ಲಿ ರೈತರಿಂದ ರೈಲು ತಡೆದು ಪ್ರತಿಭಟನೆ

Prasthutha|

ಅಮೃತಸರ: ರೈತರು ಸೇರಿ ಎಂಟು ಮಂದಿಯನ್ನು ಬಲಿ ಪಡೆದ ಲಖಿಂಪುರ ಹಿಂಸಾಚಾರಕ್ಕೆ ಒಂದು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಪಂಜಾಬ್ ಕಿಸಾಬ್ ಮಝ್ದೂರ್ ಸಂಘರ್ಷ್ ಸಮಿತಿಯ ನೇತೃತ್ವದಲ್ಲಿ ಅನ್ನದಾತರು ಸೋಮವಾರ ಮಧ್ಯಾಹ್ನದಿಂದ ಮೂರು ಗಂಟೆಗಳ ಕಾಲ ರೈಲು ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

- Advertisement -

ರದ್ದಾದ ಮೂರು ಕೃಷಿ ಕಾನೂನುಗಳ ವಿರುದ್ಧ ಈ ಹಿಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾದ ಆಶಿಶ್ ಮಿಶ್ರಾ ಎಂಬಾತನ ತಂದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪಾತ್ರವೂ ಇರುವುದರಿಂದ ಅವರನ್ನು ಕೂಡ ಸಂಪುಟದಿಂದ ವಜಾಗೊಳಿಸುವಂತೆ ಪ್ರತಿಭಟನಕಾರರು ಆಗ್ರಹಿಸಿ ಈ ರೈಲು ತಡೆ ನಡೆಸಿದರು.

ನಾವು ಅಮೃತಸರ-ದೆಹಲಿ, ಅಮೃತಸರ – ಖೇಮ್’ಕರನ್ ಮತ್ತು ಅಮೃತಸರ – ಪಠಾಣ್’ಕೋಟ್ ಸೇರಿದಂತೆ 17 ಕಡೆಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಮಾರ್ಗದಲ್ಲಿನ ರೈಲು ಸಂಚಾರವನ್ನು ನಿರ್ಬಂಧಿಸಿದ್ದೇವೆ. ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಮುಕ್ತಸರ್, ಮಾನ್ಸಾ, ಬರ್ನಾಲಾ, ಮಲೇರ್’ಕೋಟ್ಲಾ, ಸಂಗ್ರೂರ್, ಫತೇಘರ್ ಸಾಹಿಬ್, ರೂಪನಗರ್ ಮತ್ತು ನಭಾ ಎಂಬ ಎಂಟು ಸ್ಥಳಗಳಲ್ಲಿ ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಸುಡುತ್ತೇವೆ ಎಂದು ಕೆ.ಎಂ.ಎಸ್.ಸಿ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ.

- Advertisement -

ಕಳೆದ ವರ್ಷ ಅಕ್ಟೋಬರ್ 3ರಂದು ಅಂದಿನ ಉಪ ಮುಖ್ಯಮಂತ್ರಿ ಕೇಶಬ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ಉತ್ತರ ಪ್ರದೇಶದ ಲಖಂಪುರ ಖೇರಿಯ ಟಿಕುನಿಯಾ ಗ್ರಾಮದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿಂಸಾಚಾರ ಏರ್ಪಟ್ಟು ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.

Join Whatsapp