ಪಂಜಾಬ್ ಸಂಪುಟಕ್ಕೆ ನೂತನ 10 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

Prasthutha|

ಚಂಡೀಘಡ್: ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿರುವ ಎಎಪಿ ಸರ್ಕಾರಕ್ಕೆ ಒಬ್ಬರು ಮಹಿಳೆ ಸೇರಿದಂತೆ ಹತ್ತು ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ 10 ಶಾಸಕರಲ್ಲಿ 8 ಶಾಸಕರು ಹೊಸಬರು. ಅಂದರೆ ಇದೇ ಮೊದಲ ಬಾರಿಗೆ ಗೆದ್ದು ಶಾಸಕರಾದವರು. ಇನ್ನುಳಿದ ಇಬ್ಬರು ಹಿಂದಿನ ಅವಧಿಯಲ್ಲೂ ಗೆದ್ದು ಶಾಸಕರಾಗಿದ್ದರು.ಇಂದು ಮಧ್ಯಾಹ್ನ ನೂತನ ಸಚಿವರ ಮೊದಲ ಸಭೆ ನಡೆಯಲಿದೆ.

- Advertisement -

ಮಾರ್ಚ್ 16ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ್ದರು. ಭಗವಂತ್ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಪಂಜಾಬಿನ ಖಟ್ಕರ್ಕಲಾನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇದಾದ ಮೂರು ದಿನಗಳ ನಂತರ, ಇಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಒಟ್ಟು 18 ಸ್ಥಾನಗಳ ಪೈಕಿ, 10 ಸ್ಥಾನ ಭರ್ತಿಯಾಗಿದೆ. ಇಂದು ಹರ್ಪಾಲ್ ಸಿಂಗ್ ಚೀಮಾ, ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ ವಿಜಯ್ ಸಿಂಗ್ಲಾ, ಲಾಲ್ ಚಂದ್ ಕತರುಚಕ್, ಗುರ್ಮೀತ್ ಸಿಂಗ್ ಮೀತ್ ಹೇಯರ್, ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಾಮ್ ಶಂಕರ್ (ಜಿಂಪಾ) ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

- Advertisement -

Join Whatsapp