ರಾಜ್ ಕುಟುಂಬದ ಓರ್ವ ವ್ಯಕ್ತಿಗೆ ಪುನೀತ್ ರಾಜ್‌ಕುಮಾರ್ ಮರಣಿಸಿದ್ದು ಗೊತ್ತೇ ಇಲ್ಲ!

Prasthutha|

ಬೆಂಗಳೂರು: ಕನ್ನಡ ನಟ ಪುನೀತ್‌ ರಾಜ್‌ಕುಮಾರ್‌ ಸಾವಿನ ಬಗ್ಗೆ ದೇಶದ, ವಿದೇಶಗಳ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅವರ ಹತ್ತಿರದ ಕುಟುಂಬದ ಒಬ್ಬರಿಗೆ ಮಾತ್ರ ಆ ವಿಚಾರ ಇನ್ನೂ ತಿಳಿದಿಲ್ಲ.

- Advertisement -

ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ, ಪುನೀತ್‌ ರಾಜ್‌ಕುಮಾರ್‌ ಅವರ ಸೋದರ ಅತ್ತೆಗೆ ಪುನೀತ್‌ರಾಜ್‌ಕುಮಾರ್‌ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಅವರಿಗೆ ವಯಸ್ಸಾಗಿದ್ದು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರು ತಡೆದುಕೊಳ್ಳಲಾರರು ಎಂದು ಹೀಗೆ ಮಾಡಲಾಗಿದೆ.

- Advertisement -

ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್‌‌ಗೆ ಲಘು ಹೃದಯಾಘಾತ ಆದಾಗ ನಾಗಮ್ಮರಿಗೆ ದೊಡ್ಡ ಆಘಾತ ಆಗಿತ್ತಂತೆ. ಇನ್ನು ಪುನೀತ್ ವಿಚಾರ ಕೇಳಿದರೆ ಅಪಾಯವಾಗಬಹುದು ಎಂದು ಈ ವಿಚಾರವನ್ನು ಮುಚ್ಚಿಟ್ಟಿದ್ಧಾರೆ.

ನಾಗಮ್ಮ ಅವರು ಸದ್ಯ ಗಾಜನೂರಿನಲ್ಲಿ ವಾಸವಿದ್ದಾರೆ. ಮಗ ಮತ್ತು ಸೊಸೆ ಅವರನ್ನು ನೋಡಿಕೊಳ್ಳುತ್ತಿದ್ದಾರೆ.ರಾಜ್‌ಕುಮಾರ್‌ ಕುಟುಂಬದಲ್ಲಿ ಻ಅವರೇ ಹಿರಿಯ ಜೀವ. ಹಾಗಾಗಿ ಅವರ ಆರೋಗ್ಯ ಕಾಪಾಡುವುದು ರಾಜ್ ಕುಟುಂಬದ ಎಲ್ಲರಿಗೂ ಬಹಳ ಮುಖ್ಯ ಆಗಿದೆ. ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ಅವರಿಗೆ ತಿಳಿಯದಂತೆ ಎಲ್ಲರೂ ಮುತುವರ್ಜಿ ವಹಿಸಿದ್ದಾರೆ.

ಅವರಿರುವ ಮನೆಯಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಫೋಟೊಗೆ ಹಾರ ಹಾಕಿಲ್ಲ. , ನ್ಯೂಸ್‌ ಚಾನೆಲ್‌ಗಳನ್ನು ಹಾಕುವುದಿಲ್ಲ, ಊರಿನವರು ಮನೆಗೆ ಬಂದರೆ, ನಾಗಮ್ಮ ಅವರನ್ನು ಭೇಟಿ ಮಾಡಲು ಬಿಡುವುದಿಲ್ಲ. ಹೀಗೆ ಅವರಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಕುಟುಂಬಸ್ಥರು.



Join Whatsapp