ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Prasthutha|

ಇಸ್ಲಾಮಾಬಾದ್: ಭಾರತದಲ್ಲಿ ಅಸಮರ್ಪಕ ಆಡಳಿತ, ನಿರುದ್ಯೋಗ ಸಮಸ್ಯೆ,ಆರ್ಥಿಕ ಕುಸಿತ ಮುಂತಾದ ಸಮಸ್ಯೆಗಳಿಂದ ಭಾರತ ಬಳಲುತ್ತಿರುವಾಗ ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ .

- Advertisement -

ಈ ಮಧ್ಯೆ, ವಿಶ್ವ ಬ್ಯಾಂಕ್ ಭಾರತದ ಆರ್ಥಿಕ ಬೆಳವಣಿಗೆಯನ್ನು ಪ್ರಸಕ್ತ 2021-22 ನೇ ಆರ್ಥಿಕ ಸಾಲಿಗೆ ಶೇ. 8.3ರಷ್ಟು ಇರಲಿದೆ ಎಂಬ ಆಶಾದಾಯಕ ವರದಿ ನೀಡಿದೆ. ಜೊತೆಗೆ ಮುಂದಿನ ಸಾಲಿಗೆ ಶೇ. 8.7ರಷ್ಟಾಗಲಿದೆ ಎಂದೂ ಹೇಳಿದೆ.

ವಿಶ್ವ ವಾಣಿಜ್ಯ ಸಮ್ಮೇಳನದಲ್ಲಿ ಮಾತನಾಡುತ್ತಾ ಏಷ್ಯಾದ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಅದರಲ್ಲೂ ಭಾರತಕ್ಕಿಂತ ನಮ್ಮ ಆರ್ಥಿಕತೆ ಉತ್ತವಾಗಿದೆ ಎಂದು ಇಮ್ರಾನ್ ಖಾನ್ ವ್ಯಾಖ್ಯಾನಿಸಿದ್ದಾರೆ. ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದಲ್ಲಿ ಪಾಕಿಸ್ತಾನದಲ್ಲಿ ಸಾಮಾನುಗಳು ಅಗ್ಗವಾಗಿ ದೊರೆಯುತ್ತವೆ. ಆದರೂ ವಿರೋಧ ಪಕ್ಷದವರು ನಮ್ಮನ್ನು ಅಸಮರ್ಥರು ಎಂದು ಜರಿಯುತ್ತಾರೆ. ಆದರೆ ವಾಸ್ತವವಾಗಿ ನಮ್ಮ ಸರ್ಕಾರ ದೇಶವನ್ನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಇಮ್ರಾನ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡ್ಡಿದ್ದಾರೆ.

ಸದ್ಯದಲ್ಲೇ ಪಾಕ್ ಸಂಸತ್ತಿನಲ್ಲಿ ಹಣಕಾಸು ಮಸೂದೆ ಮಂಡನೆಯಾಗಬೇಕಿದ್ದು ಪ್ರಧಾನಿ ಇಮ್ರಾನ್ ಖಾನ್ ಈ ಮಾತು ಹೇಳಿರುವುದು ಗಮನಾರ್ಹ.

Join Whatsapp