ಇದ್ರೀಸ್ ಪಾಷಾನನ್ನು ಹತ್ಯೆಗೈದಿರುವ ಪುನೀತ್ ಕೆರೆಹಳ್ಳಿಯನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಂಡಿದ್ದೀರಾ?: ಅಫ್ಸರ್ ಕೊಡ್ಲಿಪೇಟೆ

Prasthutha|

- Advertisement -

ಬೆಂಗಳೂರು: ಇದ್ರೀಸ್ ಪಾಷಾನನ್ನು ಹತ್ಯೆಗೈದಿರುವ ಕೊಲೆ ಆರೋಪಿ ಪುನೀತ್ ಕೆರೆ ಹಳ್ಳಿ ಮತ್ತು ಆತನ ಪಟಲಾಂ ಅನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಂಡಿದ್ದೀರಾ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ಮಾನ್ಯ ಗೃಹ ಸಚಿವ ಪರಮೇಶ್ವರ್ ರವರೇ ದನ ಸಾಗಾಟಗಾರನ ಮೇಲೆ ಹಲ್ಲೆ ನಡೆಸಿದ ಮತ್ತು ಸ್ಟನ್ ಗನ್ ಬಳಸಿ ಚಿತ್ರಹಿಂಸೆ ನೀಡಿ ಇದ್ರೀಸ್ ಪಾಷಾನನ್ನು ಹತ್ಯೆಗೈದಿರುವ ಕೊಲೆ ಆರೋಪಿ ಪುನೀತ್ ಕೆರೆ ಹಳ್ಳಿ ಮತ್ತು ಆತನ ಪಟಲಾಂ ಅನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಂಡಿದ್ದೀರಾ?ಜಾನುವಾರಗಳ ರಕ್ಷಣಾ ಕ್ರಮಗಳನ್ನ ಮತ್ತು ಜಾನುವಾರುಗಳ ರಕ್ಷಣೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾನೂನುಗಳನ್ನು ಜಾರಿಗೆ ತರಲು ಪೋಲೀಸರು ಸಮರ್ಥರಿಲ್ಲವೇ.? ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಗಾಟವನ್ನ ತಡೆಯುತ್ತೇವೆ ಎಂದು ಹೇಳಿಕೊಂಡಿರುವ ಕೆಲವು ಸಂಘ ಪರಿವಾರದ ಗುಂಡಾ ಪ್ರವೃತ್ತಿಯ ವ್ಯಕ್ತಿಗಳು ಕಾನೂನನ್ನ ಕೈಗೆತ್ತಿಕೊಂಡು ಜಾನುವಾರ ರಕ್ಷಣೆಯ ಹೆಸರಿನಲ್ಲಿ ತಾವೇ ಸ್ವತಃ ಚೆಕ್ ಪೋಸ್ಟ್‌ಗಳ ಮಾದರಿಯಲ್ಲಿ ನಿರ್ಮಾಣ ಮಾಡಿಕೊಂಡು, ಹಳ್ಳಿಯಿಂದ ಹಳ್ಳಿಗೆ, ತಾಲೂಕಿನಿಂದ ತಾಲೂಕಿಗೆ ಕಾನೂನು ಬದ್ದವಾಗಿ ಸಾಗಾಟವಾಗಬಹುದಾದ ಜಾನುವಾರುಗಳನ್ನು ತಾವೇ ಮುಂದಾಗಿ ತಡೆದು ಚೆಕ್ ಮಾಡಿ ಹಲ್ಲೇ ಮತ್ತು ಸುಲಿಗೆ ಮಾಡುವ ಯೋಜನೆಗಳನ್ನು ಮಾಡಿಕೊಂಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಇಂತಹ ದುಷ್ಕೃತ್ಯಗಳು ಜರುಗದಂತೆ ತಮ್ಮ ಪೊಲೀಸ್ ಇಲಾಖೆಯ ಮೂಲಕ ಸೂಕ್ತ ಕಾನೂನು ಕ್ರಮ ವಹಿಸಬೇಕೆಂದು ಮತ್ತು ಯಾವುದೇ ಸಮಾಜಘಾತುಕರು ಕಾನೂನನ್ನ ಕೈಗೆತ್ತಿಕೊಂಡು ಮತ್ತೊಂದು ಸಮುದಾಯವನ್ನು ದ್ವೇಷಿಸುವ ಉದ್ದೇಶದಿಂದ ದಾಳಿಗಳನ್ನು ನಡೆಸಿದಂತೆ ಅಗತ್ಯ ಎಚ್ಚರಿಕೆಯನ್ನು ನೀಡಲು ಈ ಮೂಲಕ ಆಗ್ರಹಿಸುತ್ತೇನೆ ಎಂದು‌ ಬರೆದುಕೊಂಡಿದ್ದಾರೆ.

Join Whatsapp