ಮಧ್ಯಪ್ರದೇಶ: ಫ್ರಿಡ್ಜ್​ಗಳಲ್ಲಿ ಗೋಮಾಂಸ ಪತ್ತೆ ಆರೋಪ: 11 ಮನೆಗಳ ನೆಲಸಮ

Prasthutha|

- Advertisement -

ನೈನ್‌ ಪುರ: ಫ್ರಿಡ್ಜ್​ಗಳಲ್ಲಿ ಗೋಮಾಂಸವಿಟ್ಟಿರುವ ಆರೋಪದ ಮೇರೆಗೆ ಜಿಲ್ಲಾಡಳಿತವು 11 ಮನೆಗಳನ್ನು ನೆಲಸಮಗೊಳಿಸಿದ ಘಟನೆ ಮಧ್ಯಪ್ರದೇಶದ ನೈನ್‌ಪುರದ ಭೈಸವಾಹಿ ಪ್ರದೇಶದಲ್ಲಿ ನಡೆದಿದೆ.

ನೈನ್‌ಪುರದ ಭೈಸವಾಹಿ ಪ್ರದೇಶದಲ್ಲಿ ಬಲಿ ಕೊಡಲು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ತರಲಾಗಿದೆ ಎಂಬ ರಹಸ್ಯ ಮಾಹಿತಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಜತ್ ಸಕ್ಲೇಚಾ ತಿಳಿಸಿದ್ದಾರೆ.

- Advertisement -

ಎಲ್ಲಾ 11 ಆರೋಪಿಗಳ ಮನೆಗಳಲ್ಲಿನ ರೆಫ್ರಿಜರೇಟರ್‌ಗಳಿಂದ ಹಸುವಿನ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ನಾವು ಪ್ರಾಣಿಗಳ ಕೊಬ್ಬು, ಚರ್ಮ ಮತ್ತು ಮೂಳೆಗಳನ್ನು ಸಹ ಕಂಡುಕೊಂಡಿದ್ದೇವೆ, ಅದನ್ನು ಕೋಣೆಯಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ಮಾಂಸವು ಗೋಮಾಂಸ ಎಂದು ಸ್ಥಳೀಯ ಸರ್ಕಾರಿ ಪಶುವೈದ್ಯರು ಖಚಿತಪಡಿಸಿದ್ದಾರೆ ಎಂದು ಎಸ್ಪಿ ಹೇಳಿದರು. ಡಿಎನ್‌ಎ ವಿಶ್ಲೇಷಣೆಗಾಗಿ ನಾವು ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಿದ್ದೇವೆ. ಸರ್ಕಾರಿ ಜಮೀನಿನಲ್ಲಿದ್ದ 11 ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದರು.

Join Whatsapp