ಪತ್ರಕರ್ತೆ ಮೇಘಾ ರಾಜಗೋಪಾಲನ್‌ ಗೆ ಪ್ರತಿಷ್ಠಿತ ʼಪುಲಿಟ್ಝರ್‌ ಪ್ರಶಸ್ತಿ

Prasthutha|

ಚೀನಾದಲ್ಲಿ ಸಾವಿರಾರು ಮುಸ್ಲಿಮರನ್ನು ಕೂಡಿ ಹಾಕಲು ಬೃಹತ್‌ ಜೈಲುಗಳನ್ನು ನಿರ್ಮಿಸಿದ್ದ ಕುರಿತ ವರದಿಗಾರಿಕೆಗೆ ಒಲಿಯಿತು ಅಂತಾರಾಷ್ಟ್ರೀಯ ಪ್ರಶಸ್ತಿ

- Advertisement -

ನ್ಯೂಯಾರ್ಕ್‌ : ಚೀನಾದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಮುಸ್ಲಿಮರನ್ನು ಕೂಡಿ ಹಾಕಲು ಬೃಹತ್‌ ಜೈಲು(ಬಂಧನ ಕೇಂದ್ರ)ಗಳನ್ನು ನಿರ್ಮಿಸಿದ್ದುದನ್ನು ಬಯಲಿಗೆಳೆದು ವರದಿ ಮಾಡಿದ್ದ ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ ಪ್ರತಿಷ್ಠಿತ “ಪುಲಿಟ್ಝರ್‌” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇಘಾ ರಾಜಗೋಪಾಲನ್‌ ಸೇರಿದಂತೆ ಮೂವರು ಪತ್ರಕರ್ತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿನೂತನ ತನಿಖಾ ವರದಿಗಳ ಮೂಲಕ ಮೌಲ್ಯಯುತ ಸುದ್ದಿಗಳನ್ನು ಪ್ರಕಟಿಸಿದ್ದಕ್ಕಾಗಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇದು ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತ ಮೂಲದ ಇಬ್ಬರು ಪತ್ರಕರ್ತರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

- Advertisement -

ಬುಝ್‌ಫೀಡ್‌ ನ್ಯೂಸ್‌ ಸುದ್ದಿ ಸಂಸ್ಥೆಗೆ ಮೇಘಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ವರದಿಗಾಗಿ ʼಟಂಪಾ ಬೇ ಟೈಮ್ಸ್‌ʼ ವರದಿಗಾರರಾದ ನೀಲ್‌ ಬೇಡಿ ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಇನ್ನೋರ್ವ ವರದಿಗಾರರಾದ ಕ್ಯಾಥ್ಲಿನ್‌ ಮ್ಯಾಕ್‌ ಗ್ರೊರಿ ಎಂಬವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚೀನಾದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ರಹಸ್ಯವಾಗಿ ಬೃಹತ್‌ ಜೈಲುಗಳನ್ನು ನಿರ್ಮಿಸಿ ಮತ್ತು ಸಾಮೂಹಿಕ ತಡೆ ಶಿಬಿರಗಳನ್ನು ನಿರ್ಮಿಸಿ ಅದರಲ್ಲಿ ಮಕ್ಕಳೂ ಸೇರಿದಂತೆ, ಸಾವಿರಾರು ಮುಸ್ಲಿಮರನ್ನು ಬಂಧಿಸಿಟ್ಟಿದ್ದ ವಿಚಾರವನ್ನು ಮೇಘಾ ತನ್ನ ವಿಶಿಷ್ಟ ತನಿಖಾ ವರದಿಗಳ ಮೂಲಕ ಬಹಿರಂಗಪಡಿಸಿದ್ದರು. ಕ್ಸಿನ್‌ಜಿಯಾಂಗ್‌ ಸುದ್ದಿ ಸರಣಿಗಾಗಿ ʼಅಂತಾರಾಷ್ಟ್ರೀಯ ವರದಿʼ ವಿಭಾಗದಲ್ಲಿ ಮೇಘಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.



Join Whatsapp