ಶುಲ್ಕ ಒತ್ತಡ ಮಾಡುವ ಶಾಲೆಗಳ ವಿರುದ್ದ ಕ್ರಮ ಕೈಗೊಳ್ಳಲು ಸಚಿವ ಸುರೇಶ್ ಕುಮಾರ್ ಸೂಚನೆ

Prasthutha: June 12, 2021

ಬೆಂಗಳೂರು: ಖಾಸಗಿ ಶಾಲೆಗಳಿಂದ ಶುಲ್ಕ ಕಟ್ಟಲು ಪೋಷಕರಿಗೆ ಒತ್ತಡ ಹಾಕ್ತಿರುವುದು ಮತ್ತು ಕೆಲ ಶಾಲೆಗಳಿಂದ‌ ಫೀಸ್ ಕಟ್ಟಲು ಲೋನ್ ಕೊಡಿಸುತ್ತಿರುವ ವಿಚಾರವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಶುಲ್ಕ ಕಟ್ಟಲು ಒತ್ತಡ ಮಾಡೋ ಶಾಲೆಗಳ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್  ಸೂಚನೆ ನೀಡಿದ್ದಾರೆ.

ಶುಲ್ಕಕ್ಕೆ ಪೀಡಿಸುವ ಶಾಲೆಗಳು ಮತ್ತು ಲೋನ್ ಕೊಡಿಸುತ್ತಿರುವ ಶಾಲೆಗಳ ಮೇಲೆ ಪೋಷಕರು ದೂರು ಕೊಡಲಿ. ಸ್ಥಳೀಯ ಬಿಇಓಗಳಿಗೆ ಪೋಷಕರು ದೂರು ಕೊಟ್ಟರೆ ಸಾಕು. ಅಂತಹ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಯಾವುದೇ ಶಾಲೆಗಳು ಪೋಷಕರಿಗೆ ಶುಲ್ಕ ಕಟ್ಟಲು ಒತ್ತಡ ಹಾಕಬಾರದು. ಕೊರೊನಾ ಪರಿಸ್ಥಿತಿಯಲ್ಲಿ ಪೋಷಕರಿಗೆ ಶುಲ್ಕಕ್ಕೆ ಪೀಡಿಸೋದು ಸರಿಯಲ್ಲ. ಇಂತಹ ಶಾಲೆಗಳ ವಿರುದ್ದ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಅಲ್ಲದೆ ಶುಲ್ಕ ಕಟ್ಟಲು ಒತ್ತಡ ಹಾಕುತ್ತಿರೋ ಶಾಲೆಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಆಯುಕ್ತರು ಬಿಇಓಗಳಿಗೆ ಸೂಚಿಸಿದ್ದಾರೆ. ಎಲ್ಲ ಬಿಇಓಗಳಿಗೆ ಸೂಚನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಸಚಿವ ಸುರೇಶ್ ಕುಮಾರ್ ಸೂಚನೆ ಮೇರೆಗೆ ಎಲ್ಲಾ ಬಿಇಓಗಳಿಗೆ ಆದೇಶ ಮಾಡಿದ್ದಾರೆ.

ಯಾವುದೇ‌ ಶಾಲೆ ಶುಲ್ಕ ಪಡೆಯಲು ಒತ್ತಡ ಹಾಕುತ್ತಿದ್ದರು ಅಂತಹ ಶಾಲೆ ಮೇಲೆ ಕ್ರಮ ತೆಗೆದುಕೊಳ್ಳಿ, ಶಾಲೆಗಳ ಮೇಲೆ ಕ್ರಮ‌ ತೆಗೆದುಕೊಂಡ ಬಳಿಕ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಬಿಇಓಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ