ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಸಾರ್ವಜನಿಕರು ಸಹಕರಿಸಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ತೀರ್ಥಹಳ್ಳಿ: ರಾಜ್ಯದಲ್ಲಿ ನೈಟ್ ಕರ್ಫ್ಯೂ ಇಂದು ರಾತ್ರಿ 10 ಗಂಟೆಯಿಂದ ಜಾರಿಗೆ ಬರಲಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡ ಈ ಅನಿವಾರ್ಯ ನಿಬಂಧನೆಯನ್ನು ರಾಜ್ಯದ ಜನತೆ ಪಾಲಿಸಬೇಕೆಂದು, ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಮನವಿ ಮಾಡಿದ್ದಾರೆ.

- Advertisement -


ರೂಪಾಂತರ ಒಮಿಕ್ರಾನ್ ವೈರಾಣು, ವಿಶ್ವದ ಹಲವು ರಾಷ್ಟ್ರಗಳನ್ನು ಭಾದಿಸಿದ್ದು, ಬದುಕು ಹಾಗೂ ಆರ್ಥಿಕತೆಗೆ ಆತಂಕ ತಂದಿದೆ. ರಾಜ್ಯದಲ್ಲಿ ತಜ್ಞರ ಸಲಹೆ ಸೂಚನೆಯಂತೆ, ನೈಟ್ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ವಾಗಿ, ಸಾರ್ವಜನಿಕರು, ಪೊಲೀಸರ ಜೊತೆಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.


ರಾಜ್ಯದ ಜನತೆ ಕೋರೋನ ಕಾರಣದಿಂದ ಈಗಾಗಲೇ, ಆರ್ಥಿಕವಾಗಿ ಜರ್ಜರಿತ ವಾಗಿದ್ದು, ಚೇತರಿಕೆಯ ಹಾದಿಯಲ್ಲಿದ್ದಾಗ ಮತ್ತೆ ನೈಟ್ ಕರ್ಫ್ಯೂ ನಿಬಂಧನೆಗೆ ಒಳಗಾಗುತ್ತಿರುವುದು, ಸಂತೋಷದಾಯಕ ವಿಷಯವಲ್ಲ, ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಈ ನಿರ್ಧಾರವನ್ನು ಪಾಲಿಸಲೇ ಬೇಕು ಎಂದು ಸಚಿವರು ಹೇಳಿದ್ದಾರೆ.

Join Whatsapp