ಮಂಗಳೂರು : ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ಬೆಳಗ್ಗೆ 6 ಗಂಟೆಯಿಂದ ಜನರು ಕ್ಯೂನಲ್ಲಿ ನಿಂತು ಕೋವಿಡ್ ಲಸಿಕೆ ಪಡೆಯಲು ಮುಗಿಬಿದ್ದ ಘಟನೆ ನಡೆದಿದೆ.
200ಕ್ಕೂ ಹೆಚ್ಚು ಜನರು ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸದೆ ಸಾಮಾಜಿಕ ಅಂತರವಿಲ್ಲದೆ ಗುಂಪಾಗಿ ನಿಂತು ದ.ಕ ಜಿಲ್ಲಾಡಳಿತ ದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಕೋವಿಡ್ ವಾಕ್ಸಿನ್ ಲಸಿಕೆ ಇಲ್ಲ. ಕೋವಿಶೀಲ್ಡ್ ಲಸಿಕೆ ಮಾತ್ರ ಇದೆ. ಜಿಲ್ಲಾಧಿಕಾರಿ ಬಂದ ನಂತರ ಮೊದಲ ಲಸಿಕೆ ನೀಡುತ್ತೇವೆ ಅಂತಾ ಹೇಳುತ್ತಿದ್ದಾರೆ ಎಂದು ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕ್ಯೂ ನಲ್ಲಿ ನಿಂತ ಜನ ತಲೆಸುತ್ತಿ ಬಿದ್ದ ಘಟನೆಯೂ ನಡೆದಿದೆ.