ಪಿಎಸ್‌ಐ ಅಕ್ರಮ ಪರೀಕ್ಷೆ| ಅಮ್ರಿತ್ ಪೌಲ್ ನನ್ನು ವಶಕ್ಕೆ ಪಡೆದ ಸಿಐಡಿ

Prasthutha|

- Advertisement -

ಬೆಂಗಳೂರು: ಪಿಎಸ್‌ಐ ಅಕ್ರಮ ಪರೀಕ್ಷೆ ಪ್ರಕರಣದ ಆರೋಪಿ, ಐಪಿಎಸ್‌ ಅಧಿಕಾರಿ ಅಮ್ರಿತ್ ಪೌಲ್ ಅವರನ್ನು ಸಿಐಡಿ ತಂಡವು ಮತ್ತೆ ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಅಮ್ರಿತ್ ಪೌಲ್ ನನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಸಿಐಡಿಯ ಡಿವೈಎಸ್‌ಪಿ ಅಂಜುಪಾಲ ಅವರ ನೇತೃತ್ವದ ತಂಡವು ವಶಕ್ಕೆ ಪಡೆದಿದೆ.

- Advertisement -

ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಅಕ್ರಮ ಪರೀಕ್ಷೆ ಬಗ್ಗೆ ಪ್ರಕರಣ ದಾಖಲಾಗಿತ್ತು.

Join Whatsapp