ಕಲಬುರಗಿ: ರಾಜ್ಯ ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿದಂತೆ ಐವರು ಕೊನೆಗೂ ಸಿಐಡಿ ಬಲೆಗೆ ಬಿದ್ದಿದ್ದಾರೆ.
ಗುರುವಾರ ಆರೋಪಿ ಜ್ಯೋತಿ ಪಾಟೀಲ್ ಬಂಧನವಾಗಿತ್ತು. ವಿಚಾರಣೆ ವೇಳೆ ದಿವ್ಯಾ ಸೇರಿ ಎಲ್ಲರೂ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿರುವುದನ್ನು ಜ್ಯೋತಿ ಪಾಟೀಲ್ ಬಾಯ್ಬಿಟ್ಟಿದ್ದರು. ತಡ ಮಾಡದೇ ರಾತ್ರಿಯೇ ಪುಣೆಗೆ ತೆರಳಿದ ಸಿಐಡಿ ತಂಡ, ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.