ಹಿಂದಿ ರಾಷ್ಟ್ರ ಭಾಷೆ ಎನ್ನುವುದರಲ್ಲಿ ತಪ್ಪೇನೂ ಇಲ್ಲ ಎಂದ ಸಚಿವ ಮುರುಗೇಶ್ ನಿರಾಣಿ

Prasthutha|

ಬೆಂಗಳೂರು: ಕೆಂದ್ರ ಸರಕಾರ ದೇಶಾದ್ಯಂತ ಹಿಂದಿ ಹೇರಿಕೆ ನಡೆಸುತ್ತಿರುವ ಮಧ್ಯೆಯೇ ಸಚಿವ ಮುರುಗೇಶ್ ನಿರಾಣಿ ಹಿಂದಿ ಭಾಷೆಯ ಪರ ಬ್ಯಾಟ್ ಬೀಸಿದ್ದಾರೆ. ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಸಚಿವ ನಿರಾಣಿ ಹೇಳಿದ್ದಾರೆ.

- Advertisement -

ಕನ್ನಡ ಭಾಷೆಯನ್ನೂ ನಾನೂ ಪ್ರೀತಿಸುತ್ತೇನೆ, ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬ ಕೂಗು ಮೊದಲಿನಿಂದಲೂ ಇದೆ ಎಂದಿದ್ದಾರೆ. ಹೆಚ್ಚು ಭಾಷೆ ಕಲಿತಷ್ಟೂ ನಮಗದು ಅನುಕೂಲ ನಾವು ಕನ್ನಡಿಗರು, ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ. ಇಂಗ್ಲಿಷ್ ಸ್ಥಳೀಯ ಭಾಷೆಯಲ್ಲದಿದ್ದರೂ, ಹೊರ ದೇಶಗಳಲ್ಲಿ ಸಂವಹನ ನಡೆಸಲು ಇಂಗ್ಲಿಷ್ ಕಲಿಯಬೇಕಾಗಿದೆ. ನಾನೂ ಕೂಡ ಗ್ರಾಮೀಣ ಭಾಗದವನಾಗಿರುವುದರಿಂದ ಕನ್ನಡವನ್ನು ಪ್ರೀತಿಸುತ್ತೇನೆ. ಹಿಂದಿ ಭಾಷೆ ಕಲಿಯುವುದರಲ್ಲಿ ಯಾವ ತಪ್ಪೂ ಇಲ್ಲ. ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸುವುದರಲ್ಲಿ ತಪ್ಪೇ ಇಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೆ ಬಾಲಿವುಡ್ ನಟ ಅಜಯ್ ದೇವ್’ಗನ್ ಮತ್ತು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮಧ್ಯೆ ಬಾಷೆಗಳ ವಿಚಾರಕ್ಕೆ ಸಂಬಂಧಿಸಿ ಟ್ವಿಟರ್ ವಾರ್ ನಡೆದಿತ್ತು. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಿದ್ದ ಕಿಚ್ಚನಿಗೆ ಅಜಯ್ ದೇವ್’ಗನ್, ಹಿಂದಿ ನಮ್ಮ ಮಾತೃಭಾಷೆಯಾಗಿದ್ದು, ಮತ್ತು ರಾಷ್ಟ್ರ ಭಾಷೆಯಾಗಿ ಯಾವಾಗಲೂ ಇರುತ್ತದೆ ಎಂದು ಹೇಳಿದ್ದರು.

Join Whatsapp