ಗುರ್ಗಾಂವ್ ನಲ್ಲಿ ಮತ್ತೆ ನಮಾಝ್ ಗೆ ತಡೆ: ಸ್ಥಳಕ್ಕೆ ಸೆಗಣಿ ಬೆರಣಿ ಹರಡಿ ವಿಕೃತಿ ಮೆರೆದ ಸಂಘಪರಿವಾರ

Prasthutha|

ಗುರ್ಗಾಂವ್: ಹರ್ಯಾಣದ ಗುರ್ಗಾಂವ್ ನಲ್ಲಿ ಸಂಘಪರಿವಾರ ಶುಕ್ರವಾರದ ನಮಾಝ್ ಗೆ ಮತ್ತೆ ತಡೆವೊಡ್ಡಿ, ಪ್ರತಿಭಟನೆಯ ನೆಪದಲ್ಲಿ ಪ್ರಾರ್ಥನಾ ಸ್ಥಳಕ್ಕೆ ಸಗಣಿ ಬೆರಣಿಯನ್ನು ಹರಡಿ ವಿಕೃತಿ ಮೆರೆದ ಘಟನೆ ವರದಿಯಾಗಿದೆ.

- Advertisement -

ಮಾತ್ರವಲ್ಲ ಜಿಲ್ಲಾಡಳಿತದ ವತಿಯಿಂದ ನಮಾಝ್ ಗೆ ಮೀಸಲಿಟ್ಟ ಜಾಗದಲ್ಲಿ ವಾಲಿಬಾಲ್ ಅಂಕಣ ನಿರ್ಮಿಸುವುದಾಗಿ ಸವಾಲೆಸೆದಿದೆ. ಬೆಳಗ್ಗೆಯಿಂದಲೇ ವಿವಾದಿತ ಸ್ಥಳದಲ್ಲಿ ಜಮಾವಣೆಗೊಂಡ ಸಂಘಪರಿವಾರದ ಕಾರ್ಯಕರ್ತರು ನಮಾಝ್ ನಡೆಸದಂತೆ ಜನರನ್ನು ತಡೆಯುತ್ತಿದ್ದಾರೆ.

ಮುಸ್ಲಿಮರ ನಮಾಝ್ ನಿರ್ವಹಿಸುವುದನ್ನು ತಡೆಯುವ ಸಲುವಾಗಿ ಪ್ರಾರ್ಥನಾ ಸ್ಥಳದಲ್ಲಿ ಸಗಣಿ ಬೆರಣಿ ಹರಡಿ, ಸ್ಥಳವನ್ನು ಮಲಿನ ಗೊಳಿಸಿದೆ.

- Advertisement -

ಈ ಮಧ್ಯೆ ಕಳೆದ ಹಲವಾರು ವಾರಗಳಿಂದ ನಮಾಝ್ ಗೆ ಸಂಘಪರಿವಾರ, ಬೆದರಿಕೆ ಮತ್ತು ತಡೆವೊಡ್ಡುತ್ತಿರುವ ಮಧ್ಯೆ ಮುಸ್ಲಿಮ್ ಸಂಘಟನೆಗಳು ಇಂದು ಆ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದೆ.

ಸಂಘಪರಿವಾರ ಮತ್ತು ಸ್ಥಳೀಯರು ನಮಾಝ್ ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕಳೆದ ವಾರದ ಆರಂಭದಲ್ಲಿ ಮುಸ್ಲಿಮರು ಶುಕ್ರವಾರ ತೆರೆದ ಸ್ಥಳದಲ್ಲಿ ನಮಾಝ್ ನಿರ್ವಹಿಸಲು ಜಿಲ್ಲಾಡಳಿತದ ಅನುಮತಿ ಕಡ್ಡಾಯವೆಂದು ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.

ಮುಸ್ಲಿಮರು ನಮಾಝ್ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಧಾವಿಸಿದ ಜಿಲ್ಲಾಡಳಿತ ನಮಾಝ್ ಅನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ 19 ನೇ ಸೆಕ್ಟರ್ ನಲ್ಲಿ ಮುಸ್ಲಿಮರು ನಿರ್ವಹಿಸದಂತೆ ತಡೆವೊಡ್ಡಿದ ಸಂಘಪರಿವಾರ ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಘೋಷನೆ ಕೂಗಿ ದಾಂಧಲೆ ನಡೆಸಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಮ್.ಎಲ್. ಖಟ್ಟರ್, ಪ್ರಾರ್ಥಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರಾರ್ಥನೆ ನಿರ್ವಹಿಸುವವರು ರಸ್ತೆ ಸಂಚಾರವನ್ನು ನಿರ್ಬಂಧಿಸಬಾರದು ಎಂದು ಎಚ್ಚರಿಸಿದ್ದರು.



Join Whatsapp