ವಿಟ್ಲ: ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ನೇತಾರರ ನಿವಾಸಗಳ ಮೇಲೆ ಹಾಗೂ ಕಚೇರಿಗಳ ಮೇಲೆ ಎನ್.ಐ.ಎ ನಡೆಸಿದ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾ ವಿಟ್ಲ ತಾಲೂಕು ಸಮಿತಿ ವತಿಯಿಂದ ವಿಟ್ಲ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಖಲಂದರ್ ಪರ್ತಿಪ್ಪಾಡಿ, ಸಂಘಪರಿವಾರ ದೇಶವನ್ನು ಹಿಂದುತ್ವ ರಾಷ್ಟ್ರದತ್ತ ಕೊಂಡೊಯ್ಯುತ್ತಿರುವಾಗ ಅದರ ವಿರುದ್ದ ಧ್ವನಿಗಳನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರಿ ಏಜನ್ಸಿಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದರು.
ಮತ್ತೋರ್ವ ಮುಖ್ಯ ಭಾಷಣಕಾರ ರಹಿಮಾನ್ ಮಠ ಮಾತನಾಡಿ, ಆರೆಸ್ಸೆಸ್ಸಿನ ಶಾಖೆಯಿಂದ ಬರುವ ಆದೇಶಗಳನ್ನು ಕಾರ್ಯರೂಪಕ್ಕೆ ತರುವ ಒಂದು ವಿಭಾಗವಾಗಿ ಇಂದು ಈಡಿ, ಎನ್.ಐ.ಎ ಬದಲಾಗಿದೆ. ಪಾಪ್ಯುಲರ್ ಫ್ರಂಟಿನ ಕಟ್ಟಕಡೆಯ ಕಾರ್ಯಕರ್ತ ಜೀವಂತವಿರುವ ತನಕ ದೇಶವನ್ನು ಹಿಂದುತ್ವ ರಾಷ್ಟ್ರವನ್ನಾಗಿಸಲು ಬಿಡಲಾರೆವು ಎಂದರು.
ಪಾಪ್ಯುಲರ್ ಫ್ರಂಟ್ ವಿಟ್ಲ ತಾಲೂಕು ಅಧ್ಯಕ್ಷ ರಹೀಂ ಆಲಾಡಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಪಾಪ್ಯುಲರ್ ಫ್ರಂಟ್ ವಿಟ್ಲ ತಾಲೂಕು ಕಾರ್ಯದರ್ಶಿಗಳಾದ ಹನೀಫ್ ಬೋಳಿಯಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.