ಬಸ್ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತ್ಯು; ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

Prasthutha|

ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯವಾಗಿದ್ದ 1st ಪಿಯುಸಿ ವಿದ್ಯಾರ್ಥಿನಿಯ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯದ ಯುವತಿ ರಕ್ಷಿತ(16) ನಗರದ ಹೌಸಿಂಗ್ ಬೋರ್ಡ್’ನಲ್ಲಿ ಬಸ್ ಇಳಿಯುವಾಗ ಬಿದ್ದು, ಮೆದುಳು ನಿಷ್ಕ್ರಿಯಗೊಂಡಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಿದ್ದು, ಆಕೆಯ  ಅಂಗಾಂಗ ಕಸಿ ಪ್ರಕ್ರಿಯೆ ಇಂದು ನಡೆದಿದೆ.

- Advertisement -

ಕುಟುಂಬಸ್ಥರ ಸಮ್ಮತಿಯೊಂದಿಗೆ ಒಟ್ಟು ಒಂಬತ್ತು ಅಂಗಗಳನ್ನ ದಾನ ಮಾಡಲಾಗಿದೆ. ಮೂವರು ತಜ್ಞ ವೈದ್ಯರ ನೇತೃತ್ವದಲ್ಲಿ ಇಂದು ಬೆಳಗ್ಗೆಅಂಗಾಂಗ ಕಸಿ ಪ್ರಕ್ರಿಯೆ ನಡೆದಿದೆ. ಹೆಲಿಕಾಪ್ಟರ್ ಮೂಲಕ ಅಂಗಾಂಗ ರವಾನಿಸಲಾಗಿದೆ.  ವಿಶೇಷ ವಿಮಾನದ ಮೂಲಕ ಚಿಕ್ಕಮಗಳೂರಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ  ಜೀವಂತ ಹೃದಯವನ್ನು ಸಾಗಿಸಲಾಗಿದೆ.

- Advertisement -