ಆಸ್ಟ್ರೇಲಿಯಾದಲ್ಲಿ ಅದಾನಿ ಕಲ್ಲಿದ್ದಲು ಗಣಿ ಯೋಜನೆ ವಿರೋಧಿಸಿ ಕ್ರಿಕೆಟ್ ಮೈದಾನಕ್ಕಿಳಿದ ಪ್ರತಿಭಟನಕಾರರು

Prasthutha|

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಅದಾನಿ ಗ್ರೂಪ್ ನ ಕಲ್ಲಿದ್ದಲು ಯೋಜನೆಯನ್ನು ವಿರೋಧಿಸಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಇಬ್ಬರು ಪ್ರತಿಭಟನಾಕಾರರು ಭದ್ರತೆಯನ್ನು ಉಲ್ಲಂಘಿಸಿ ಸಿಡ್ನಿ ಕ್ರಿಕೆಟ್ ಮೈದಾನವನ್ನು ಪ್ರವೇಶಿಸಿದ ಘಟನೆ ನಡೆದಿದೆ.  

- Advertisement -

ವೇಗಿ ನವದೀಪ್ ಸೈನಿ ಆರನೇ ಓವರ್ ಎಸೆಯಲು ಸಿದ್ಧರಾಗುತ್ತಿರುವಾಗ ಪ್ರತಿಭಟನಾಕಾರಲ್ಲೋರ್ವ ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಯೋಜನೆ ವಿರೋಧಿಸುವ ಪ್ರದರ್ಶನಾ ಫಲಕ ಹಿಡಿದು ಪಿಚ್ ಅನ್ನು ಸಮೀಪಿಸಿದ್ದ.  ಭದ್ರತಾ ಸಿಬ್ಬಂದಿಗಳನ್ನು ಅವರನ್ನು ಹೊರಗೆ ಕರೆದೊಯ್ದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಯೋಜನೆಗಾಗಿ ಅದಾನಿ ಎಂಟರ್ ಪ್ರೈಸಸ್ ಗೆ 1 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಸಾಲವನ್ನು ನೀಡುವ ನಿರ್ಣಯವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿಂದೆಗೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.  ಆಸ್ಟ್ರೇಲಿಯಾದ ಕಲ್ಲಿದ್ದಲು ಗಣಿಯನ್ನು ಅಗೆಯಲು ಜಗತ್ತಿನ ಯಾವುದೇ ಬ್ಯಾಂಕ್ ಗಳು ಹಣಕಾಸು ನೆರವು ಒದಗಿಸಲು ಬಯಸುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸಾಲದ ಮೂಲಕ ಭಾರತೀಯ ತೆರಿಗೆ ಪಾವತಿದಾರರ ಹಣವನ್ನು ಅದಾನಿಗೆ ಒದಗಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

- Advertisement -

“ಅದಾನಿಯ ಸಾಲವನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೌಲ್ ಔಟ್ ಮಾಡಬೇಕು ಮತ್ತು ಭಾರತದ ಸುರಕ್ಷಿತ ಭವಿಷ್ಯಕ್ಕಾಗಿ ಬ್ಯಾಟ್ ಬೀಸಬೇಕು” ಎಂದು ಸ್ಟಾಪ್ ಅದಾನಿ ಸಂಘಟನೆಯ ವಕ್ತಾರ ಮಂಜೋತ್ ಕೌರ್ ಹೇಳಿದ್ದಾರೆ.

Join Whatsapp