ಜಮ್ಮು: ಕಾಶ್ಮೀರಿಗಳಿಗೆ ಭಾರತೀಯತೆಯನ್ನು ಕಲಿಸುವ ಸಮಯ ಬಂದಿದೆ ಎಂದು ಬಿಜೆಪಿ ಮುಖಂಡ ಕವಿಂದರ್ ಗುಪ್ತಾ ಹೇಳಿದ್ದಾರೆ. ಈ ಹಿಂದೆ, ಕಾಶ್ಮೀರದಲ್ಲಿ ಧ್ವಜ ಹಾರಿಸುವ ಅಥವಾ ಭಾರತ ಮಾತೆಯನ್ನು ವೈಭವೀಕರಿಸಲು ಯಾರೂ ಇರಲಿಲ್ಲ. ಇದು ಅಂತಹವರಿಗೆ ಭಾರತೀಯತೆಯನ್ನು ಕಲಿಸುವ ಸಮಯವಾಗಿದೆ. ಕಾಶ್ಮೀರದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಪ್ರಸ್ತಾಪವನ್ನು ಬೆಂಬಲಿಸಿ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದಾರೆ.
370 ನೇ ವಿಧಿಯನ್ನು ರದ್ದುಪಡಿಸುವುದರೊಂದಿಗೆ ಕಾಶ್ಮೀರದ ಉದ್ವಿಘ್ನತೆ ಕಡಿಮೆಯಾಯಿತು ಮತ್ತು ಕರ್ಫ್ಯೂ ತೆಗೆದುಹಾಕಲಾಯಿತು. ಈಗ ನಾವು ಕಾಶ್ಮೀರಿಗಳಿಗೆ ಭಾರತೀಯತೆ ಏನು ಎಂದು ಕಲಿಸಬೇಕು. ರಾಷ್ಟ್ರ ಧ್ವಜ ನಮ್ಮ ಹೆಮ್ಮೆ. ಕಾಶ್ಮೀರದ ರಾಜ್ಯ ಧ್ವಜವನ್ನು ಹಾರಿಸುವುದು ತಪ್ಪು. ಆ ಪರಿಕಲ್ಪನೆ ಮುಗಿದ ಅಧ್ಯಾಯವಾಗಿದೆ” ಎಂದು ಕವಿಂದರ್ ಹೇಳಿದ್ದಾರೆ.
70 ವರ್ಷಗಳಿಂದ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವ ಧ್ವಜಾರೋಹಣ ಮಾಡುವ ಒಬ್ಬ ವ್ಯಕ್ತಿಯೂ ಕಾಶ್ಮೀರದಲ್ಲಿ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಎಂದರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದರು. ಇದೇ ರೀತಿಯ ಆದೇಶವನ್ನು ಅನಂತ್‌ನಾಗ್ ಡೆಪ್ಯುಟಿ ಕಮೀಷನರ್ ಕೂಡ ಹೊರಡಿಸಿದ್ದಾರೆ.