RSS – ವಿಶ್ವಹಿಂದೂ ಪರಿಷತ್ ನಿಷೇಧಕ್ಕೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಧಾನಸಭೆಯಲ್ಲಿ ಪ್ರಸ್ತಾಪ !

Prasthutha|

- Advertisement -

ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹಿಂದುತ್ವ ತೀವ್ರಗಾಮಿ ಸಂಘಟನೆಗಳಾದ ಅರ್ ಎಸ್ ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತನ್ನು ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (NSW) ವಿಧಾನಸಭೆಯಲ್ಲಿ ಪ್ರಸ್ತಾಪಿಸಿದೆ. ಸಿಐಎ ಮಿಲಿಟರಿಯಿಂದ ಉಗ್ರಗಾಮಿ ಧಾರ್ಮಿಕ ಸಂಘಟನೆ ಎಂದು ಪರಿಗಣಿಸಲ್ಪಟ್ಟಿರುವ ಬಲಪಂಥೀಯ ಹಿಂದುತ್ವ ಸಂಘಟನೆಗಳಾದ RSS ಮತ್ತು VHP ಸಂಘಟನೆಯ 16 ಮಂದಿ ಹಲ್ಲೆಕೋರರು ಸಿಖ್ ಸಮುದಾಯದ ನಾಲ್ವರು ಯುವಕರ ಮೇಲೆ ಬೇಸ್ಬಾಲ್ ಬ್ಯಾಟ್, ಸುತ್ತಿಗೆ ಮತ್ತು ಕೊಡಲಿಯಿಂದ ಸಾಮೂಹಿಕ ಹಲ್ಲೆ ನಡೆಸಿ ಅವರ ಹೊಸ ಕಾರನ್ನು ಇತ್ತೀಚೆಗೆ ಒಡೆದು ಹಾಕಿದ್ದರು ಎನ್ನಲಾಗಿದೆ. ಹಲ್ಲೆಗೊಳಲ್ಪಟ್ಟವರು ಭಾರತದಲ್ಲಿ ನಡೆಯುವ ರೈತ ಹೋರಾಟವನ್ನು ಬೆಂಬಲಿಸುವ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಘಟನೆಯ ಕುರಿತು ನ್ಯೂಸ್ ಔತ್ ವೇಲ್ಸ್ ನ ಸೆನೆಟರ್ ಡೇವಿಡ್ ಶೂಬರ್ಗ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಶೂಬರ್ಗ್ ಮಾತನಾಡುತ್ತಾ, “ ಈ ನವ ನಾಜಿಗಳಾಗಿರುವ ಆರೆಸ್ಸೆಸ್ ಮತ್ತು ವಿಶ್ವಹಿಂದೂ ಪರಿಷತ್ ನ ಕಾರ್ಯ ಚಟುವಟಿಕೆಗಳ ಕುರಿತು ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸಿದೆಯೇ? ಅಮೆರಿಕಾದ ಸಿಐಎ ಉಗ್ರಗಾಮಿಗಳೆಂದು ಪರಿಗಣಿಸುವ ಈ ಸಂಘಟನೆಗಳು ಆಸ್ಟ್ರೇಲಿಯಾದಲ್ಲಿ ನೆಲೆ ಕಂಡಿರುವುದು ಹೇಗೆ ಮತ್ತು ನ್ಯೂ ಸೌತ್ ವೇಲ್ಸ್ ಸಾರ್ವಜನಿಕ ಶಾಲೆಗಳಲ್ಲಿ ಈ ಸಂಘಟನೆಗಳಿಂದ ಧಾರ್ಮಿಕ ತರಗತಿಗಳನ್ನು ನಡೆಸಲಾಗುತ್ತಿರುವುದು ಹೇಗೆ? “ ಎಂದು ಅವರು ಅಲ್ಲಿನ ಬಹುಸಂಸ್ಕೃತಿ ಸಚಿವ ಜೆಫ್ ಲೀ ಅವರನ್ನು ಪ್ರಶ್ನಿಸಿದ್ದಾರೆ. ಸಿಖ್ಖರ ಮೇಲಿನ ದಾಳಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ಸಂಘಟನೆಗಳು ಸರಕಾರದ ರಾಡಾರಿನಲ್ಲಿದೆಯೇ? ಇದ್ದರೆ ಅವುಗಳ ವಿರುದ್ಧ ತೆಗೆದುಕೊಳ್ಳುವ ಕ್ರಮಗಳೇನು?” ಎಂದು ಅವರು ಕೇಳಿದ್ದಾರೆ. ಇದೀಗ ಘಟನೆಯು ಸರಕಾರಿ ವೇದಿಕೆಗಳಲ್ಲಿ ಚರ್ಚೆಯಾಗಿರುವುದರಿಂದ ಈ ತೀವ್ರಗಾಮಿ ಸಂಘಟನೆಗಳ ವಿರುದ್ಧ ಆಸ್ಟ್ರೇಲಿಯ ಸರಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಳೆಯುವಂತಿಲ್ಲ ಎನ್ನಲಾಗಿದೆ.

- Advertisement -

ಈ ವಿಷಯದ ಕುರಿತು ಟ್ವಿಟ್ಟರಿನಲ್ಲಿ ಪ್ರಸ್ತಾಪಿಸಿರುವ ಭಾರತೀಯ ಪಿಎಚ್‌ಡಿ ವಿದ್ವಾಂಸೆ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾ.ನಮ್ರತಾ ದತ್ತ ಅವರು, “ಆಸ್ಟ್ರೇಲಿಯಾ ಸರಕಾರವು ವಿಶ್ವ ಹಿಂದೂ ಪರಿಷತ್ ಮತ್ತು ಆರ್‌ಎಸ್‌ಎಸ್ ನ ಮೇಲೆ ನಿಷೇದ ಹೇರಲಿದೆ. ಇತ್ತೀಚೆಗಿನ 4 ಸಿಖ್ ಯುವಕರ ಮೇಲಿನ ಹಲ್ಲೆಯ ಹಿನ್ನೆಲೆಯಲ್ಲಿ RSS ಮತ್ತು VHP ಯನ್ನು ನಿಯೋ ನಾಝಿಗಳು ಎಂದು ಕರೆಯಲಾಗಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಅವರೊಂದಿಗೆ ಯಾವುದೇ ಸಂಬಂಧವು ಶಿಕ್ಷಾರ್ಹ ಅಪರಾಧವಾಗಿರುತ್ತದೆ ” ಎಂದು ಹೇಳಿದ್ದಾರೆ.

Join Whatsapp