ಬಂಗಾಳದಲ್ಲಿ ‘ದೀದಿ’ ಎದುರು ಜನ ಸೇರಿಸಲು 3 ರೈಲುಗಳನ್ನು ಬಾಡಿಗೆ ಪಡೆದ ಬಿಜೆಪಿ !

Prasthutha|

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ಮೂರು ರೈಲುಗಳನ್ನು ಬಾಡಿಗೆಗೆ ಪಡೆದು ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿಯ ಬ್ರಿಗೇಡ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಸೇರಿಸಲಾಗಿತ್ತು ಎಂದು ತಿಳಿದು ಬಂದಿದೆ.

- Advertisement -

ಉತ್ತರ ದಿನಾಜ್‌ಪುರ ಜಿಲ್ಲೆಯ ಅಲಿಪುರ್ದುರ್, ಮಾಲ್ಡಾ ಮತ್ತು ಹರಿಶ್ಚಂದ್ರಪುರದಿಂದ ಬುಕ್ ಮಾಡಲಾಗಿರುವ ಈ ಮೂರು ರೈಲುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಿಜೆಪಿಯು 60 ಲಕ್ಷ ರೂ. ಖರ್ಚು ಮಾಡಿದೆ ಎನ್ನಲಾಗಿದೆ.

ಅಲಿಪುರ್ದುರ್ ಮತ್ತು ಮಾಲ್ಡಾದಿಂದ ಶನಿವಾರ ಸಂಜೆ ಹೊರಟ 22 ಬೋಗಿಗಳ ಎರಡು ವಿಶೇಷ ರೈಲು ಭಾನುವಾರ ಬೆಳಿಗ್ಗೆ 6 ಗಂಟೆಗೆ ಹೌರಾ ನಿಲ್ದಾಣವನ್ನು ತಲುಪಿದೆ ಎನ್ನಲಾಗಿದೆ. ಎರಡು ರೈಲುಗಳ ಬಾಡಿಗೆ ಶುಲ್ಕ ಕ್ರಮವಾಗಿ 26 ಲಕ್ಷ ಮತ್ತು 22 ಲಕ್ಷ ರೂ.ಗಳಾಗಿದೆ. ಹರಿಶ್ಚಂದ್ರಪುರದಿಂದ ಹೊರಟ 16 ಭೋಗಿಗಳನ್ನು ಹೊಂದಿರುವ ಮೂರನೇ ವಿಶೇಷ ರೈಲು ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ ಸೀಲ್ಡಾ ನಿಲ್ದಾಣವನ್ನು ತಲುಪಿದ್ದು, ಈ ರೈಲಿನ ಬಾಡಿಗೆ ಶುಲ್ಕ 18 ಲಕ್ಷ ರೂ.ಗಳಾಗಿದೆ.

ಈ ಮೂರು ರೈಲುಗಳು ಹೌರಾ ಮತ್ತು ಸೀಲ್ಡಾದಲ್ಲಿ 18 ಗಂಟೆಗಳ ಕಾಲ ಕಾದು, ಪ್ರಧಾನಿಯ ರ‍್ಯಾಲಿ ಮುಗಿದ ನಂತರ ಬಿಜೆಪಿ ಬೆಂಬಲಿಗರನ್ನು ಆಯಾ ಸ್ಥಳಗಳಿಗೆ ಹಿಂತಿರುಗಿಸಿದೆ. ವಿಶೇಷ ರೈಲಿನ ಶುಲ್ಕದ ಶೇಕಡಾ 10 ಕ್ಕಿಂತ ಹೆಚ್ಚು ಹಣವನ್ನು ಪಾವತಿಸುವ ಮೂಲಕ ರೈಲುಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -