ಕುಲಪತಿ ಹುದ್ದೆಗೇರಲು ರಾಮಸೇನೆಯ ಪ್ರಸಾದ್ ಅತ್ತಾವರನಿಗೆ ಲಂಚ ನೀಡಿದ್ದ ಪ್ರೊಫೆಸರ್ ಗೆ ವಿವಿಯಿಂದ ಡಿಮೋಶನ್ !

Prasthutha|

ಮಂಗಳೂರು : ವಿಶ್ವವಿದ್ಯಾನಿಲಯದ ಕುಲಪತಿಯಾಗಲು ಮಂಗಳೂರಿನ ರಾಮಸೇನೆಯ ಅಧ್ಯಕ್ಷ ಪ್ರಸಾದ್ ಅತ್ತಾವರನಿಗೆ ಲಕ್ಷಾಂತರ ರೂಪಾಯಿಗಳ ಲಂಚ ನೀಡಿದ್ದ ಮಂಗಳೂರಿನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಯಶಂಕರ್ ಅವರನ್ನು ವಿವಿ ಆಡಳಿತ ಮಂಡಳಿ ಡಿಮೋಷನ್ ಮಾಡಿದೆ. ವಿವಿ ವ್ಯಾಪ್ತಿಯ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಸ್ಥಾನದಲ್ಲಿದ್ದ ಜಯಶಂಕರ್ ಅವರನ್ನು ಅಲ್ಲಿಂದ ತೆಗೆದು ಹಾಕಲಾಗಿದೆ. ಅವರ ಸ್ಥಾನಕ್ಕೆ ಭೌತಶಾಸ್ತ್ರದ ಪ್ರೊಫೆಸರ್ ಆಗಿರುವ ರವೀಂದ್ರಾಚಾರಿ ಎಂಬವರನ್ನು ನೇಮಿಸಲಾಗಿದೆ.

- Advertisement -

ಮಡಿಕೇರಿ ಮೂಲದವರಾಗಿರುವ ಜಯಶಂಕರ್ ಅವರು ಮಂಗಳೂರು ವಿವಿ ಅಥವಾ ರಾಯಚೂರು ವಿವಿಯ ಕುಲಪತಿ ಹುದ್ದೆಗೇರಲು ವಿವೇಕ್ ಆಚಾರ್ಯ ಮತ್ತು ಪ್ರಸಾದ್ ಅತ್ತಾವರನ ಮೂಲಕ ಮಾತುಕತೆ ನಡೆಸಿದ್ದರು. ಇದಕ್ಕಾಗಿ 30 ಲಕ್ಷ ರೂಪಾಯಿಗಳ ವ್ಯವಹಾರ ಕುದುರಿಸಿದ್ದರು. ಆದರೆ ಡೀಲ್ ನಂತೆ ಕುಲಪತಿ ಹುದ್ದೆ ಸಿಗದೇ ಇದ್ದಾಗ ಜಯಶಂಕರ್ ಅವರು ಕಂಕನಾಡಿ ಠಾಣೆಗೆ ಪ್ರಸಾದ್ ಅತ್ತಾವರನ ವಿರುದ್ಧ ದೂರು ನೀಡಿದ್ದರು. ಪ್ರಸಾದ್ ಅತ್ತಾವರ ಈ ಹಿಂದೆ ಹಿಂದುತ್ವ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು, ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ . ಅಂತಹಾ ವ್ಯಕ್ತಿಯೋರ್ವನ ಜೊತೆಗೆ ವ್ಯವಹಾರ ಕುದುರಿಸಿದ್ದ ಪ್ರೊಫೆಸರ್ ಬಗ್ಗೆಯೇ ಸಾರ್ವಜನಿಕರು ಕಿಡಿ ಕಾರಿದ್ದರು.



Join Whatsapp