ಅಂಬಾನಿ ಮನೆ ಮುಂದೆ ಬಾಂಬ್ ಪತ್ತೆ ಪ್ರಕರಣ | ಹತ್ಯೆಯಾದ ಮನ್ಸುಖ್ ಹಿರೇನ್ ಸಂಚುಕೋರ : NIA ಹೇಳಿಕೆ

Prasthutha|

ಮುಂಬೈ :  ಮುಕೇಶ್ ಅಂಬಾನಿ ಮನೆ ಎದುರು ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯ ಜತೆಗೆ ಹತ್ಯೆಯಾದ ಮನ್ಸುಖ್ ಹಿರೇನ್ ಕೂಡ ಸಂಚುಕೋರರಾಗಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೇಳಿದೆ.

- Advertisement -

ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಹಾಗೂ ಬೆದರಿಕೆ ಪತ್ರದೊಂದಿಗೆ ಪತ್ತೆಯಾದ ಕಾರು ಹಿರೇನ್ ಅವರದ್ದಾಗಿತ್ತು. ಹಿರೇನ್ ಅವರನ್ನು ಮಾರ್ಚ್ 2 ಮತ್ತು 3ರ ನಡುವೆ ಮುಗಿಸುವಂತೆ ಇತರೆ ಆರೋಪಿಗಳು ಸಂಚು ರೂಪಿಸಿದ್ದರು ಎಂದು NIA ತಿಳಿಸಿದೆ. ಮಾರ್ಚ್ 4ರಂದು ಹಿರೇನ್ ನಾಪತ್ತೆಯಾಗಿದ್ದರು. ಮರುದಿನ ಮನ್ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು.

‘ಸಾರ್ವಜನಿಕ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಎಸ್‌ಯುವಿಯನ್ನು ನಿಲ್ಲಿಸಿದ ಪ್ರಕರಣದಲ್ಲಿ ಮನ್ಸುಖ್ ಹಿರೇನ್ ಕೂಡ ಒಬ್ಬ ಸಂಚುಕೋರರಾಗಿದ್ದರು. ಅವರನ್ನು ಬಳಿಕ ಹತ್ಯೆ ಮಾಡಲಾಯಿತು’ ಎಂದು ವಾಜೆ ಅವರನ್ನು ಎನ್‌ಐಎ ವಶಕ್ಕೆ ನೀಡುವಂತೆ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವಾಗ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ತಿಳಿಸಿದ್ದಾರೆ.

- Advertisement -

ಹಿರೇನ್ ಹತ್ಯೆಗೆ ಸಚಿನ್ ವಾಜೆ ಆರ್ಥಿಕ ಸಹಾಯ ಮಾಡಿದ್ದರು. ವಾಜೆ ಅಲ್ಲದೆ, ಅಮಾನತುಗೊಂಡಿರುವ ಪೊಲೀಸ್ ಕಾನ್‌ಸ್ಟೆಬಲ್ ವಿನಾಯಕ್ ಶಿಂದೆ ಹಾಗೂ ಕ್ರಿಕೆಟ್ ಬುಕ್ಕಿ ನರೇಶ್ ಗೌರ್ ಕೂಡ ಆರೋಪಿಗಳಾಗಿದ್ದಾರೆ. ಹಿರೇನ್ ಕೊಲೆ ಸಂಚು ನಡೆಯುವಾಗ ವಾಜೆ ಮತ್ತು ಶಿಂದೆ ಇಬ್ಬರೂ ಹಾಜರಿದ್ದರು ಎಂದು ಅವರು ತಿಳಿಸಿದ್ದಾರೆ.

Join Whatsapp